ಪದ್ಮನಾಭ ಆಗುಂಬೆ ಅವರ ’ಕುರುಡು ಮಂತ್ರ ’ ಕೃತಿಯು ಕಾದಂಬರಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸುಬ್ರಾಯ ಚೊಕ್ಕಾಡಿ ಅವರು, ವಿಶಾಲ ಬಯಲಲ್ಲಿ ಯಾವುದೇ ರೀತಿಯ ಅಬ್ಬರವಿಲ್ಲದೆ ಸಾವಧಾನವಾಗಿ ತುಂಬಿ ಹರಿಯುತ್ತಿರುವ ನದಿಯಂತೆ ಕಾಣಿಸುವ ಪದ್ಮನಾಭ ಆಗುಂಬೆಯವರ `ಕುರುಡು ಮಂತ್ರ' ಕಾದಂಬರಿಯು ಮುಖ್ಯವಾಗಿ ಇದರ ನಾಯಕ ಟೀಕಪ್ಪನ ಸುದೀರ್ಘ ಪಯಣದ ಕತೆ. ಹಸಿರುಪೇಟೆಯಿಂದ ಆರಂಭಿಸಿ ಮೊಕಾಮಾ ತನಕ ಚಲಿಸಿ ಮರಳಿ ಮೂಲದೆಡೆಗೇ ತಲುಪಿ ಸ್ಥಿರಗೊಳ್ಳುವ ಟೀಕಪ್ಪನ ಬದುಕಿನ ಚಲನೆಯ ನಿಧಾನ ಶ್ರುತಿಯ ಅನುರಣನ ಓದುಗನ ಮನದಲ್ಲೂ ಪ್ರತಿಧ್ವನಿಸುವ ರೀತಿಯಲ್ಲಿ ಈ ಕಾದಂಬರಿಯ ಬರವಣಿಗೆ ಇದೆ. ಇದು ಹುಲಿಯ ಬೆನ್ನೇರಿದಂತೆ, ಸುಳ್ಳು,, ಮೋಸ, ಕೊಲೆಗಳಲ್ಲೇ ಬೆಳೆದು ಇಳಿಯಲಾಗದೆ. ಅಥವಾ ಇಳಿಯುವ ಮನಸ್ಸೇ ಇರದೆ ದೇವಮಾನವನ ರೂಪ ಪಡೆದುಕೊಂಡ ಟೀಕಪ್ಪನ ಕತೆ. ‘ಕಮೂ’ನ ಕಾದಂಬರಿಯ ನಾಯಕನನ್ನು ನೆನಪಿಸುವ, ಆತ್ಮಸಾಕ್ಷಿಯನ್ನು ಕಳೆದುಕೊಂಡು ಭಾವಹೀನವಾದ ಟೀಕಪ್ಪನ ಕತೆ. ಯಾವುದೇ ಸಂಘರ್ಷವಿರದ, ಆದರೆ ಟೀಕಪ್ಪನು ಬದುಕಿದ ರೀತಿಯೇ ಸಂಘರ್ಷದ ರೂಪವನ್ನು ಪಡೆದುಕೊಂಡಂತೆ ಕಾಣಿಸುವ ಕತೆ ಇದಾಗಿದ” ಎಂದು ಪ್ರಶಂಸಿಸಿದ್ದಾರೆ.
ಪದ್ಮನಾಭ ಆಗುಂಬೆ ಮೂಲತಃ ಆಗಂಬೆಯವರು. ಸದ್ಯ , ಚೆನೈಯಲ್ಲಿ ವಾಸವಿದ್ದಾರೆ. ಕೃತಿಗಳು: ಕುರುಡು ಮಂತ್ರ (ಕಾದಂಬರಿ) ...
READ MORE