`ಕುಮುದಿನಿ ಅಥವಾ ಬಾಲಕ್ಕೆ ಬಡಿದಾಟ' ಶೀರ್ಷಿಕೆಯ ಐತಿಹಾಸಿಕ ಕಾದಂಬರಿಯನ್ನು ಗಳಗನಾಥರು ಬರೆದಿದ್ದಾರೆ. ಈ ಕಾದಂಬರಿಯು ಮೊದಲು 1913ರಲ್ಲಿ ಪ್ರಥಮ ಮುದ್ರಣ ಕಂಡಿತ್ತು. ಕಾದಂಬರಿಯ ಮುಖ್ಯ ಕೇಂದ್ರವೇ-ಕುಮುದಿನಿ. ಈ ಕುಮುದಿನಿಯಂತಹ ಹೆಸರನ್ನೂ, ವಿಜಯನಗರದ ಅರಸರು ಆನೆಯಂತಹ ಸಾಮ್ರಾಜ್ಯವನ್ನೂ ಕಳೆದುಕೊಂಡು ಚಂದ್ರಗಿರಿಯಂತಹ ಸಂಸ್ಥಾನಕ್ಕಾಗಿ ಪರಸ್ಪರ ಬಡಿದಾಡಿದ್ದನ್ನು ಇಲ್ಲಿ ಚಿತ್ರಿಸಲಾಗಿದೆ. ಆದ್ದರಿಂದ ಇದನ್ನು ಬಾಲಕ್ಕೆ ಬಡಿದಾಟ ಎಂದೂ ಹೆಸರಿಸಿದೆ ಎಂದು ಲೇಖಕ ಗಳಗನಾಥರು ಹೇಳಿದ್ದಾರೆ. ವಿಜಯನಗರದ ಅರಸರು, ಪಂಪಾಕ್ಷೇತ್ರ, ಎಚ್ಚಮನಾಯಕ ಹೀಗೆ ಕಾದಂಬರಿ ತನ್ನ ವಿಷಯ ವಸ್ತುವಿನ ಸುರುಳಿಯನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ವಿಜಯನಗರದ ಶ್ರೀಮಂತಿಕೆಯು ಕ್ರಮೇಣ ಪತನದತ್ತ ಸಾಗುತ್ತಿರುವ ನೋಟವನ್ನು ಸವಿವರವಾಗಿ ಚಿತ್ರಿಸಲಾಗಿದೆ.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE