ಲೇಖಕ ಕೃಷ್ಣಮೂರ್ತಿ ಪುರಾಣಿಕ ಅವರ ಸಾಮಾಜಿಕ ಕಾದಂಬರಿ ‘ಕುಲವಧು’. ಇದು ತುಂಬಾ ಹಿಂದಿನ ಕಾದಂಬರಿ ಮತ್ತು ಚಲನಚಿತ್ರವಾದುದರಿಂದ ಓದುಗರಿಗೆ ನೆನಪು ಬರಿಸಲು ಹಾಡುಗಳ ನೆರವು ಬೇಕಾಯಿತು. ಕೃಷ್ಣ ಮೂರ್ತಿ ಪುರಾಣಿಕರ ಕಾದಂಬರಿಗಳಲ್ಲಿ ಹೆಣ್ಣು ಮಕ್ಕಳಿಗೆ ಧೈರ್ಯ ಕೊಡುವಂತಹ ಪಾತ್ರಗಳೇ ಹೆಚ್ಚು. ಆಗಿನ ದಿನಗಳಲ್ಲಿ ಜನರನ್ನು ಬಹಳವಾಗಿ ಕಾಡುತ್ತಿದ್ದ ವರದಕ್ಷಿಣೆ ಸಮಸ್ಯೆಯನ್ನು ಆಧಾರವಾಗಿ ಬಳಸಿಕೊಂಡು ಕಥೆಯನ್ನು ಹೆಣೆದಿದ್ದಾರೆ. ಸೊಸೆಯಾಗಿ ಮನೆ ತುಂಬುವ ಹೆಣ್ಣು ಕುಲವಧುವಾಗಿ ಜೀವನದ ಕಷ್ಟ ಸುಖಗಳಲ್ಲಿ ತನ್ನ ಕರ್ತವ್ಯವನ್ನು ಹೇಗೆ ನಿಭಾಯಿಸಬೇಕು ಎಂಬ ಸಂದೇಶವನ್ನು ಈ ಕಾದಂಬರಿ ನೀಡುತ್ತದೆ. ಕಥೆಯ ಕಾಲ 1956 ರ ಆಸುಪಾಸಿನದ್ದು. ಅಂದಿನ ಸಮಾಜದ ರೀತಿನೀತಿಗಳನ್ನು ಗಮನದಲ್ಲಿಟ್ಟುಕೊಂಡು ಓದಿದರೆ ಮಾತ್ರ ಕಾದಂಬರಿಯಲ್ಲಿರುವ ಸಮಸ್ಯೆಗಳು ಈಗಿನವರಿಗೆ ಅರ್ಥವಾಗಬಹುದು.
ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು ಬೆಳ್ಳೆತೆರೆ ಕಂಡಿವೆ. 'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...
READ MORE