ಕುಡ್ಪಲ್ ಭೂತ

Author : ಅನು ಬೆಳ್ಳೆ (ರಾಘವೇಂದ್ರರಾವ)

Pages 184

₹ 150.00




Year of Publication: 2017
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಲೇಖಕರಾದ ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಕಾದಂಬರಿ ’ಕುಡ್ಪಲ್ ಭೂತ’.

ಈ ಕಾದಂಬರಿಯು ಪತ್ತೇದಾರಿ ಕಾದಂಬರಿಯ ಶೈಲಿಯಲ್ಲಿ ಸಾಗುತ್ತಾ ವರದಿಯನ್ನು ಹುಟ್ಟುಹಾಕುವ ರೀತಿಯಲ್ಲಿ ಇತಿಹಾಸವನ್ನು ದಾಖಲಿಸುತ್ತಾ ಹೋಗುತ್ತದೆ. 

ಬ್ರಿಟಿಷ್ ಕಾಲದಲ್ಲಿದ್ದ ಕೊತ್ತಣ್ಣ ಎಂಬುವವನ ಅಂಗಡಿಯನ್ನು ತೆರೆಯುವ ನೆನಪಿನಲ್ಲಿ ಆ ಊರಿನ ಕೊತ್ತಣ್ಣನ ಅಂಗಡಿ ಕೊನೆಗೆ ಕೊತ್ತಂಗಡಿ ಆಯಿತೆಂಬುದರ ಪ್ರತೀತಿಯನ್ನು ಹೇಳುತ್ತಾ ಸಾಗುವ ಕಾದಂಬರಿಯ ಕಥಾ ವಸ್ತು ಆರಂಭವಾಗುತ್ತದೆ. ’ಕುಡ್ಪಲ್ ಭೂತ’ವನ್ನು ಸೃಷ್ಟಿಸುತ್ತಾ, ಹುಡುಕುತ್ತಾ, ಕೊತ್ತಂಗಡಿಯಲ್ಲಿ ಎಲ್ಲರೂ ಭೂತಗಳೇ’ ಎಂಬ ನಿರ್ಣಯಕ್ಕೆ ತಂದೊಡ್ಡುವ ಕಾದಂಬರಿ ಒಂದು ರೀತಿಯ ಸಾಮಾಜಿಕ ವ್ಯವಸ್ಥೆಯನ್ನು , ಮತ್ತು ರಾಜಕೀಯ ವ್ಯವಸ್ಥೆಯನ್ನು , ಸಮಕಾಲೀನ ಸಾಮಾಜಿಕ ಪರಿಸ್ಥಿಯನ್ನೂ ಸೂಕ್ಷ್ಮವಾಗಿ ತಿಳಿಸುತ್ತದೆ.

ಒಂದು ಹಳ್ಳಿಯ ಜೀವನ ಚಿತ್ರಣದ ಜೊತೆಗೆ  ಅಲ್ಲಿಯ ಜನರ ಮುಗ್ದತೆ, ಸಾಂಸ್ಕೃತಿಕ ಚೆಲುವು , ನಡೆ-ನುಡಿಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಲಾಗಿದೆ. ಬಹಳಷ್ಟು ಆಪ್ತವೆನಿಸುವ ಸನ್ನಿವೇಶಗಳು, ನಂಬಿಕೆಗಳು, ಶ್ರದ್ಧೆಗಳು ಪಾತ್ರಗಳ ಮೂಲಕ ಕಂಡುಕೊಳ್ಳುವ ರೀತಿಯಲ್ಲಿ ಮುಂದುವರೆಯುತ್ತದೆ.  ಕುತೂಹಲವೊಂದನ್ನೇ ಪ್ರಧಾನವಾಗಿರಿಸದೇ, ಹಳ್ಳಿ ಬದುಕಿನ ಬವಣೆಯನ್ನೂ ಕಾದಂಬರಿ ಬಿತ್ತರಿಸುತ್ತದೆ.

About the Author

ಅನು ಬೆಳ್ಳೆ (ರಾಘವೇಂದ್ರರಾವ)

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ...

READ MORE

Related Books