ಖಿಲ

Author : ಶಶಿಧರ ವಿಶ್ವಾಮಿತ್ರ

Pages 278

₹ 210.00




Year of Publication: 2014
Published by: ಸಾಹಿತ್ಯ ಭಂಡಾರ

Synopsys

ಶಶಿಧರ ವಿಶ್ವಾಮಿತ್ರ ಅವರ ಕಾದಂಬರಿ ‘ಖಿಲ’. ಈ ಕಾದಂಬರಿಯಲ್ಲಿರುವುದು ವಿಶ್ವಾಮಿತ್ರರ ಮುಸ್ಸಂಜೆ, ಶಿಥಿಲ ಕಾದಂಬರಿಗಳು ಹೇಳುವ ಕಥೆಯ ಮುಂದುವರಿದ ಭಾಗ. ಮನುಷ್ಯಕುಲದಿಂದ ಆಗುತ್ತಿರುವ ಪಂಚಭೂತಗಳ ನಿಲ್ಲದ, ಎಗ್ಗಿಲ್ಲದ ಶೋಷಣೆ; ಸಕಲಚರಾಚರವನ್ನೂ ಯಂತ್ರಜ್ಞಾನ-ತಂತ್ರಜ್ಞಾನಗಳ ಮೂಲಕ ನಿಯಂತ್ರಿಸಿ ತನ್ನ ಸ್ವಾರ್ಥಕ್ಕಾಗಿ ದುಡಿಸಿಕೊಳ್ಳಬೇಕೆಂದು ಹವಣಿಸುವ ಅದರ ದುರಾಸೆ, ಮತ್ತು ಅದನ್ನು ತಾನು ಹಾಗೆ ದುಡಿಸಿಕೊಳ್ಳಬಹುದು ಎಂದು ತಿಳಿದಿರುವ ಅದರ ಹುಚ್ಚುತನ, ಹುಂಬತನಗಳು; ವ್ಯಾಪಾರವಹಿವಾಟಿನಲ್ಲಿ ಲಾಭಗಳಿಸುವುದೇ ಪರಮಮೋಕ್ಷವೆಂದು ಅದರಲ್ಲಿನ ಹಲಕೆಲವರು ಭ್ರಮಿಸಿರುವುದು-ಇವುಗಳತ್ತ, ಕಾವ್ಯಸದೃಶವಾದ ಕಥೆ-ಕಥನಗಳ ಮೂಲಕ, ನಮ್ಮ ಗಮನವನ್ನು ಸೆಳೆದು, ನಮಗೆ ನಾವು ಏನು ಮಾಡುಕೊಳ್ಳುತ್ತಿದ್ದೇವೆಂದು ನಾವು ಧ್ಯಾನಿಸುವಂತೆ ಮಾಡುತ್ತದೆ.

About the Author

ಶಶಿಧರ ವಿಶ್ವಾಮಿತ್ರ

ಶಶಿಧರ ವಿಶ್ವಾಮಿತ್ರ ಅವರು ಬರಹಗಾರರು ಕೃತಿಗಳು: ಖಿಲ, ವಿಜ್ಞಾನಿಗಳ ಬೆಳಕು, ಬಯಲು (ಅನುವಾದ), ಸರಳ ಆರೋಗ್ಯ ವಿಜ್ಞಾನ, ಸಂಚಿ (ಆತ್ಮಕಥೆ), ಹಿಂದೂ ಧರ್ಮ ಭಾರತೀಯ ಪರಂಪರೆಯ ಬೆಳಕು, ಪದ ಕುಸಿಯೇ  ನೆಲವಿಹುದು, ಸೃಷ್ಟಿಯ ರಂಗವಲ್ಲಿ. ...

READ MORE

Related Books