‘ಖಾಲಿ ಮನೆ’ ಲೇಖಕಿ ಎ.ಪಿ. ಮಾಲತಿ ಅವರು ರಚಿಸಿರುವ ಸಾಮಾಜಿಕ ಕಾದಂಬರಿ. ತರಂಗ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ಕಾದಂಬರಿಯ ಕತೆ ವಿಶಿಷ್ಟವಾದದ್ದು. ಬಾಲ್ಯಕಾಲದ ಮಧುರಪ್ರೇಮವೊಂದು ಗುಪ್ತಗಾಮಿನಿಯಾಗಿ ಹರಿದು, ಕಾಲ ವಯಸ್ಸು ಮೀರಿ, ನಿರೀಕ್ಷೆಯ ಹಂತ ದಾಟಿ ಕಳೆದುಹೋಯಿತಲ್ಲ ಎಂದು ಪರಿತಪಿಸಿದರೂ, ಜೀವನದ ಸುಖಸಮೃದ್ಧಿಯ ಅನ್ವೇಷಣೆಯಲ್ಲಿ ಕಳೆದುಕೊಂಡ ಪ್ರೇಮಕ್ಕಿಂತ ಹೆಚ್ಚಿನದನ್ನು ಗಳಿಸಿ, ಯಶಸ್ಸಿನ ಶಿಖರ ಏರಿದವಳು ಈ ಕಾದಂಬರಿಯ ನಾಯಕಿ ಕುಮುದಾ.
ಎಲ್ಲ ಹೆಣ್ಣು ಮಕ್ಕಳಂತೆ ತನ್ನದೇ ಸಂಸಾರ, ಮನೆ, ಮಕ್ಕಳು ಬೇಕೆಂಬ ಕನಸುಗಳಿದ್ದರೂ ಅದು ಅಸಾಧ್ಯವಾದಾಗ ಜೀವನ. ಸಾರ್ಥಕತೆಗೆ ಇದೊಂದೆ ಕ್ಷೇತ್ರವಲ್ಲ. ಬೇರೆ ದಾರಿಗಳಿವೆ ಎಂದರಿತು ಜೀವನದೃಷ್ಟಿ ವಿಸ್ತಾರದಲ್ಲಿ, ಹೃದಯ ವೈಶಾಲ್ಯದಲ್ಲಿ ತನ್ನ ವ್ಯಕ್ತಿತ್ವ ಗುರುತಿಸಿಕೊಂಡವಳು. ಅವಳ ಬದುಕಿನ ಜೊತೆ `ನಮ್ಮದೇ ' ಕತೆಗಳೆಂಬಂತೆ ಕಾದಂಬರಿಯನ್ನು ನಿರೂಪಿಸಿದ್ದಾರೆ.
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE