ಕೇತಕಿಯ ಬನ

Author : ಶ್ರೀಧರ ಬಳಗಾರ

Pages 182




Year of Publication: 2003
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಷ್ ರಸ್ತೆ, ಧಾರವಾಡ - 580001.
Phone: 08386621406

Synopsys

‘ಕೇತಕಿಯ ಬನ’ ಕೃತಿಯು ಶ್ರೀಧರ ಬಳಗಾರ ಅವರ ಕಾದಂಬರಿಯಾಗಿದೆ. ಮಲೆನಾಡಿನ ಸಾಮಾನ್ಯ ಕುಟುಂಬದ ಕತೆಯನ್ನು ಅಸಮಾನ್ಯವಾಗಿ ಇಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯ ಮನುಷ್ಯರು, ಅವರ ನಡುವೆ ನಡೆಯುವ ಸಂಗತಿಗಳು, ಪರಿಸ್ಥಿತಿಗಳ ಅವಾಂತರ, ನಿಭಾಯಿಸುವಿಕೆ. ಆ ಪರಿಸ್ಥಿತಿಗಳ ನಡುವಲ್ಲಿ ತಮ್ಮ ತಮ್ಮ ಆಸೆ- ಕನಸುಗಳು, ನಂಬಿಕೆಗಳು, ಕಷ್ಟ-ಸುಖಗಳು, ಸುಳ್ಳು ಮೋಸಗಳು, ಅಕ್ರಮ ಸಂಬಂಧಗಳು, ಹೀಗೆ ಎಲ್ಲವನ್ನು ಒಳಗೊಂಡಿರುವುದೇ ಕೇತಕಿಯ ಬನ.

About the Author

ಶ್ರೀಧರ ಬಳಗಾರ

ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ  ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ  'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...

READ MORE

Related Books