ಕೆನಡಾದ ಪ್ರಸಿದ್ಧ ಲೇಖಕಿ ಮಾರ್ಗರೆಟ್ ಆಟ್ವುಡ್ ಅವರ ಗದ್ಯ ಕವನಗಳು ಮತ್ತು ಕಿರು ಕಾದಂಬರಿಗಳ ಸಂಗ್ರಹ 'ಮರ್ಡರ್ ಇನ್ ದ ಡಾರ್ಕ್' ನ ಕನ್ನಡ ಅನುವಾದವೇ 'ಕತ್ತಲಲ್ಲಿ ಕೊಲೆ'. ಮಾರ್ಗರೆಟ್ ಆಟ್ ವುಡ್ ತಮ್ಮ ಹರಿತವಾದ ದೃಷ್ಟಿಕೋನ ಮತ್ತು ಅಭಿವ್ಯಕ್ತಿಯಿಂದ ಗಮನ ಸೆಳೆಯುವ ಬರಹಗಾರ್ತಿಯಾಗಿದ್ದಾರೆ. ಈ ಸಂಕಲನದ ಬರಹಗಳಲ್ಲಿಯೂ ತಮ್ಮ ಸೂಕ್ಷ್ಮ ಸಂವೇದಿ ವಿಚಾರಗಳನ್ನು ಲೇಖಕಿ ವ್ಯಕ್ತಪಡಿಸಿದ್ದಾರೆ. ಮಹಿಳಾವಾದಿಗಳ ವಿಚಾರಗಳನ್ನೂ ವಿಶಿಷ್ಠ ದೃಷ್ಟಿಕೋನದಿಂದ ಇಲ್ಲಿ ನೋಡಲಾಗಿದ್ದು, ಗಂಡಸರ ಹುಸಿ ಅಹಂ ಅನ್ನು ಚನ್ನಾಗಿ ಹುರಿಯಲಾಗಿದೆ.
ಡಾ. ನವೀನ್ ಹಳೇಮನೆ ಹುಟ್ಟಿದ್ದು 1975 ತುಮಕೂರು ಜಿಲ್ಲೆಯ ಹಾಲುಗೋಣದಲ್ಲಿ. ಭಾಷಾವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿರುವ ಅವರು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಬೋಧಕ, ಮೃದುಕೌಶಲ್ಯಗಳ ತರಬೇತುದಾರ ಹಾಗು ಅನುವಾದಕ. ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ (2007), ಇಂದುಮತಿ ಶೇವರೆ ಅವರ ತಾತ್ಯಾ ಟೋಪೆ (2012) ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ಧಾರೆ. ಸಹ-ಅನುವಾದಕನಾಗಿ ಕಮಲಾ ಮುಕುಂದ ಅವರ ‘ಇವತ್ತು ಶಾಲೆಯಲ್ಲಿ ನೀನೇನು ಪ್ರಶ್ನೆ ಕೇಳಿದೆ?’ ಹಾಗೂ ಆ ಭಾಷೆ ಈ ಭಾಷೆಯಂತಲ್ಲ ಈ-ಭಾಷೆ (2010) ಮತ್ತು ಇಂಗ್ಲಿಷ್ ಕಲಿ(ಯೋ)ಸೋ ಆಟ (2012) ಎಂಬ ಕೃತಿಗಳು ಪ್ರಕಟವಾಗಿವೆ. ಪ್ರಸ್ತುತ ರಾಮನಗರ ಜಿಲ್ಲೆಯ ಲಕ್ಷ್ಮೀಪುರದ ಸರ್ಕಾರಿ ...
READ MORE