ಲೇಖಕ ಬಿ.ಎಂ. ಗಿರಿರಾಜ್ ಅವರ ಕಾದಂಬರಿ-ಕಥೆಗೆ ಸಾವಿಲ್ಲ. ಕೆನಡಾದಲ್ಲಿ ವಾಸವಿದ್ದರೂ ಹುಟ್ಟೂರು ನೆನಪು ಕಾಡುವ ಬಗೆಯನ್ನು ಈ ಕಥೆ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ವಿಷಯ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿಯಾದ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಮೌಲ್ಯಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಸಿನಿಮಾ ನಿರ್ದೇಶಕ, ರಂಗಕರ್ಮಿ, ಲೇಖಕ ಬಿ.ಎಂ. ಗಿರಿರಾಜ್ ಅವರು ಉಡುಪಿಯವರು. `ಅಮರಾವತಿ, ನವಿಲಾದವರು, ಅದ್ವೈತ, ಜಟ್ಟಾ, ಮೈತ್ರೀ' ಮುಂತಾದ ಪ್ರಯೋಗಾತ್ಮಕ ಚಿತ್ರಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ, ಸಾಹಿತ್ಯ ಕೃತಿಗಳ ಮೂಲಕವು ಹೆಸರು ಗಳಿಸಿದ್ದಾರೆ. ಅವರ ಮೊದಲು ನಿರ್ದೇಶಿಸಿದ ಚಿತ್ರ ’ಜಟ್ಟ’. ಇದು 2012ರ ಎರಡನೇ ಅತ್ಯುತ್ತಮ ಚಿತ್ರ ವಾಗಿ ರಾಜ್ಯ ಪ್ರಶಸ್ತಿಯನ್ನು ಗಳಿಸಿತು. ‘ಕಾಡ ಬೆಳಕು’ ಅವರ ನಾಟಕ ಕೃತಿ, ಹಾಗೇ ಅವರ 'ಕಥೆಗೆ ಸಾವಿಲ್ಲ' ಎಂಬ ಕಾದಂಬರಿಗೆ- 2008-9ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಲಭಿಸಿತ್ತು. ...
READ MORE