ಈ ಕಾದಂಬರಿ ಎಪ್ಪತ್ತರ ದಶಕದ ಕಥೆ. ಆ ಕಲದ ಮಡಿವಂತಿಕೆಯ ಒಂದು ಸ್ವಷ್ಟ ಚಿತ್ರಣವನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.ತುಂಬು ಮಡಿವಂತಿಕೆಯ ಮಾಧ್ವ ಬ್ರಾಹ್ಮಣರಾದ ಗೋದಾಬಾಯಿಯ ಸಂಸಾರ ಕಥನವಿದು.ಮಡಿ,ನೀತಿ,ನೇಮದಲ್ಲಿ ಮಡದಿಯನ್ನು ಸರಿಗಟ್ಟುವ ಪತಿ ಶ್ರೀಪಾದರಾಯರು.ಮೊದಲ ಮಗಳು ಜಯಂತಿ, ಗಂಡ ಸುಬ್ಬಣ್ಣನ ಅತಿ ಕಾಮುಕತೆಗೆ ಬಲಿಯಾದ ಬಗೆ, ಮಗ ಶ್ರೀಧರ ಮನೆಯಲ್ಲಿ ಅಮ್ಮನ ಇಷ್ಟದಂತೆ ನಡೆದರೂ ಹೊರಗಡೆ ಆ ಮಡಿವಂತಿಕೆ ಬಿಚ್ಚದೆ ತನ್ನಿಷ್ಟ ಪೂರೈಸುವವನು.ತಾಯಿಯ ಮಡಿವಂತಿಕೆಯನ್ನು ಚಾಚು ತಪ್ಪದೆ ಪಾಲಿಸುವ ತಂಗಿ ವಿಜಯ.ಇವೆಲ್ಲದರ ನಡುವೆ ವಿಪರೀತದ ಮಡಿಗೆ ಎಂದೂ ಮಣೆ ಹಾಕದ ಕಥಾನಾಯಕಿ ಕಲ್ಪನಾ.ಆತ್ಮೀಯ ಗೆಳತಿ ನೂರ್ ಅನ್ಯ ಧರ್ಮಕ್ಕೆ ಸೇರಿದವರಾದರೂ , ಸಂಗೀತದಲ್ಲಿ ಆಸಕ್ತಿ ವಹಿಸಿ,ಕಲಿತು ದಾಸರ ಪದಗಳನ್ನು ಹಾಡುವುದು,ಕಾಲೇಜಿನ ಸಹಪಾಠಿಗಳಾದ ವೇಣು,ಮೀರಾರ ಅಪಕ್ವವಾದ ಅಂತರ್ಜಾತಿಯ ಪ್ರೇಮ ವಿವಾಹ ಎಲ್ಲವೂ ಬ್ರಾಹ್ಮಣಿಕೆಯ ಬಗ್ಗೆ ಮನಸ್ಸನ್ನು ಕೊರೆಯುವ ಪ್ರಶ್ನೆಯಾಗಿರುವಾಗಲೇ ಅನಿರೀಕ್ಷಿತ ವಾಗಿ ಕಲ್ಪನಾ ಹಾಗೂ ವೆಂಕಟೇಶ್ ನಾಯ್ಡು ರೊಳಗೆ ಮೊಳಕೆ ಒಡೆದ ಪ್ರೇಮ ಎಲ್ಲವೂ ಈ ಕಾದಂಬರಿಯಲ್ಲಿ ಮೂಡಿಬಂದಿದೆ.ಆ ಪ್ರೇಮಕ್ಕಾಗಿ ಮಡಿವಂತಿಕೆಯ ಮನೆಯನ್ನೆ ತ್ಯಜಿಸಿ ಹೊರನಡೆದ ಕಲ್ಪನಾಳ ಬದುಕಿನಲ್ಲಿ ಕಾರ್ಮೋಡವನ್ನು ಕರಗಿಸಿತೇ ಎಂಬ ಪ್ರಶ್ನೆಯೆ ಈ ಕಾದಂಬರಿ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE