ಪ್ರೊ. ವೆಂಕಟಗಿರಿ ದಳವಾಯಿ ಅವರ ’ಕಪ್ಪು ವ್ಯಾಕರಣ’ ಸಾಂಸ್ಕೃತಿಕ ತಲ್ಲಣಗಳತ್ತ ಮುಖಮಾಡಿದ ಒಟ್ಟು 16 ಬರಹಗಳಿವೆ. ಕೃತಿಗೆ ಮುನ್ನುಡಿ ಬರೆದ ಡಾ.ಎಸ್.ನಟರಾಜ ಬೂದಾಳ್ ಅವರು, `ಸುಡುಬಿಸಿಲಿನ ಗಣಿನಾಡಿನ ಸಾಂಸ್ಕೃತಿಕ ತಲ್ಲಣಗಳು- ಲೇಖನ ಅಲ್ಲಿಯ ಜರು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಕುರಿತು ಈ ಕೃತಿ ಮಾತನಾಡುತ್ತದೆ. ಅಕ್ಷರಗಳನ್ನು ದಕ್ಕಿಸಿಕೊಳ್ಳಲು ಪಟ್ಟ ಪಾಡು ಕಡಿಮೆಯೇನಲ್ಲ. ಆದರೆ, ಈಗ ವ್ಯಾಕರಣ, ಮೀಮಾಂಸೆ ಮತ್ತು ನಮ್ಮದೇ ಆದ ಓದುಗಳನ್ನು ಹಾಗೂ ಪಾಠ್ಯಗಳನ್ನು ದಕ್ಕಿಸಿಕೊಳ್ಳಬೇಕಾಗಿದೆ. ಅಂತಹ ಹೊಸ ದಾರಿಗಳ ಶೋಧಕ್ಕೆ ಕೈಮರದಂತಿದೆ ಈ ಕೃತಿ .ಕಾವೇರಿಯಿಂದ ಗೋದಾವರಿವರಮಿರ್ದ ಕರ್ನಾಟಕದಲ್ಲಿ ಇದ್ದ ಅನೇಕ ಭಾಷೆಗಳನ್ನು ಇಲ್ಲಿಯ ಜನ ಬೇರೆ ಬೇರೆ ಭಾಷೆಗಳೆಂದೂ ಗುರುತಿಸಿದ್ದರೂ ನೆಲದ ಮೇಲೆ ಎಂದೂ ಗೆರೆ ಕೊಯ್ದಿರಲಿಲ್ಲ ಅನ್ನುವಂತಹ ವಿಚಾರಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ದಾಸ ಸಾಹಿತ್ಯದ ಹೊರ-ಒಳಗನ್ನು ಚರ್ಚಿಸುವ ಲೇಖನವೂ ಗಮನ ಸೆಳೆಯುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ವೆಂಕಟಗಿರಿ ದಳವಾಯಿ ಮೂಲತಃ ಬಳ್ಳಾರಿಯವರು. ಎಂ.ಎ, ಎಂ.ಫಿಲ್, ಹಾಗೂ ಪಿ.ಎಚ್.ಡಿ ಪದವೀಧರರು. ರಂಗಭೂಮಿ ಹಾಗೂ ಬರಹಗಳ ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತರು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಕಾರ್ಯಗಾರದಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಹಂಪಿಯ ಕನ್ನಡ ವಿ.ವಿ.ಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರು. ಪಿ.ಎಚ್.ಡಿ ಹಾಗೂ ಎಂ.ಫಿ.ಎಲ್ ಮಾರ್ಗದರ್ಶಕರು. ಕೃತಿಗಳು: ಕಪ್ಪು ವ್ಯಾಕರಣ, ಇಂದು ಹೇಳಲೆಬಾರದು, ನಾನು ನೀನು ಆನು, ಅಪ್ರಮಾಣ,ಮೇಲೊಂದು ಗರುಡ. ಸಂಪಾದಿತ ಕೃತಿಗಳು: ಕಪ್ಪು ಕಾಲಿ ಕಡಗ, ಡಾಬಾಳಾ ಸಾಹೇಬ್ ಲೋಕಪುರ ಕಥನ ಸಂವಾದ, ಅನಿಕೇತನ ಕನ್ನಡ ಸಾಹಿತ್ಯ ಅಕಾಡೆಮಿ ಸಾಹಿತ್ಯ . ವಿಮರ್ಶಾ ದಾರಿಯಲ್ಲಿ, ಕಾವ್ಯವೆಂದರೆ ಹೊಸ ಮನುಷ್ಯನ ಹುಡುಕಾಟ-ಕವಿ ...
READ MORE