ಕಣ್ಣೀರು

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 179

₹ 1.00




Year of Publication: 1949
Published by: ಸಾಹಿತ್ಯ ಕುಟೀರ
Address: ಬೆಂಗಳೂರು

Synopsys

ಕಾದಂಬರಿಕಾರ ಅ.ನ.ಕೃಷ್ಣರಾಯರು ಬರೆದ ಕಾದಂಬರಿ-ಕಣ್ಣೀರು. ಸಾಮಾಜಿಕ ಜೀವನವನ್ನು ವಿಷಮಯವಾಗಿಸುವ ರೀತಿಯನ್ನು ವಿವರಿಸಿದ ಕಾದಂಬರಿ ಇದು. ಎಲ್ಲರೂ ಶುದ್ಧ ಮನಸ್ಸಿನವರಿದ್ದರೂ ಒಂದಿಬ್ಬರು ಕೊಳಕು ಮನಸ್ಸಿನವರಿದ್ದರೆ ಹೇಗೆ ಎಲ್ಲವೂ ಕೆಡುವುದೋ ಹಾಗೆಯೇ ಸಮಾಜ ಎಂಬುದು ಇಲ್ಲಿಯ ಕಥಾ ವಸ್ತು. ಪಾಪಸುಕಳ್ಳಿ ಬೆಳೆದಿರುವ ಪ್ರದೇಶದಲ್ಲಿ ತೋಟ ಮಾಡ ಹೋಗುವುದು ಮೌಢ್ಯ. ಆದರೆ, ಪಾಪಸುಕಳ್ಳಿಯನ್ನು ಕಿತ್ತೊಗೆದು ತೋಟ ಬೆಳೆಸಬಹುದು ಎಂಬುದು ಇಲ್ಲಿಯ ಆಶಾಭಾವನೆ. ಉದಾತ್ತ ಹಾಗೂ ಅನುದಾತ್ತ ಜೀವನದ ಎರಡೂ ಮಗ್ಗಲುಗಳನ್ನು ತೋರಿಸಬೇಕು. ಆಗಲೇ, ತಾರತಮ್ಯ ಜ್ಞಾನ ಬೆಳಗುತ್ತದೆ. ಇಂತಹ ಆಶಯವೂ ಈ ಕಾದಂಬರಿಯಲ್ಲಿ ಕಾಣಬಹುದು ಎಂಬುದು ಲೇಖಕರ ಸಮರ್ಥನೆ. 

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books