`ಕಾವಲು ಕೋಟೆ' ವಿ.ಗೋಪಾಲಕೃಷ್ಣ ಅನುವಾದಿತ ಕಾದಂಬರಿಯಾಗಿದೆ. ಕತೆಯ ಉಗಮದ ರಂಧ್ರವನ್ನು ಕೊರೆದು ತೋರಿಸಿದವಳು ಅಜ್ಜಿ, ಆಕೆ ಹೇಳಿದ ಕತೆಗಳನ್ನು ಯಾವಾಗಲೂ ನೆನೆಯುತ್ತಾ ತಿರುಗಾಡಿದ ಬಾಲ್ಯದ ಜೀವನ ಬಹುದೊಡ್ಡ ಸಂತೋಷದ ದಿನಗಳೆಂದು ತೋರುತ್ತಿದೆ. ಅದನ್ನು ಉನ್ನತಿಗೆ ಏರಿಸಲು ನೆನಪು ಆಗಿದ್ದು ಮರೆಯಲಾಗದ ಒಂದು ಅಪೂರ್ವವೂ ದಿವ್ಯವೂ ಅದು ಅಪಾರ ಚೆಲುವಿನಿಂದ ಕೂಡಿದೆ ಈಗ ಯೋಚಿಸುತ್ತೇನೆ. ಅವು ಕೇವಲ ಕತೆಗಳಲ್ಲ; ಕತೆಯೊಂದಿಗೆ ಚರಿತ್ರೆಯೂ ಹಾಸುಹೊಕ್ಕಾಗಿ ಗಾದೆಗಳ ಮುಖಾಂತರ ಹೇಳಿರುವಂತಹವು ಇದು. ಈ ಭಾಷೆಯಲ್ಲಿ ಮೊಳೆತು ನನ್ನ ಬರಹದ ಮೂಲಕ ಬೆಳೆದು ಬಂದಿರುವ ಆಶೆಯೇ ಕಳ್ಳನಾಡಿನ ಬೇರುಗಳೆಲ್ಲವೂ ಪಾಳೆಪಟ್ಟುಗಳ ಚರಿತ್ರೆಯೊಂದಿಗೆ ಈ ಮಣ್ಣಿನಲ್ಲಿ ಹೆಣೆದುಕೊಂಡು ಬಂದಿದೆ. ದನಕರುಗಳನ್ನು ಕೊಂಡು ಮೇಯಿಸುತ್ತಾ ತಿರುಗಾಡಿದ ಗುಂಪು ಅವುಗಳನ್ನು ಪಳಗಿಸಿ, ಸಮಾಜದ ನಡೆನುಡಿಯಲ್ಲಿ ಎದುರುಬದುರಾಗಿ ಸವಾಲುಗಳನ್ನು ಹಾಕುತ್ತಾ ಮುಂಚೂಣಿಯಲ್ಲಿ ನಿಂತರೂ ಒಂದೇ ಮಣ್ಣಿನಲ್ಲಿ ಜೀವನ ಸಾಗಬೇಕಾದ ಸಂದರ್ಭದಲ್ಲಿ ಅವರ ದ್ವೇಷವನ್ನು ಬದಿಗಿರಿಸಿಕೊಂಡೇ ಬಂದಿದ್ದಾರೆ. 'ಜಲ್ಲಿಕಟ್ಟು' ತಮಿಳರ ಸಂಸ್ಕೃತಿಯಲ್ಲಿ ಪರಂಪರೆಯಾಗಿ ಈಗಲೂ ನೆಲೆ ನಿಂತಿದೆ. ಮಧ್ಯೆ ಬಂದ 'ತೊಟ್ಟಿ ಕುಡುಪ್ಪು' ಆನಂತರ ಮರೆಯಾಯಿತು. ಪಾಳೆಯಪಟ್ಟುಗಳಲ್ಲಿ ನಾನು ಪೂರ್ತಿ ಅಲೆದು ತಿರುಗಾಡಿದಾಗ ನನ್ನ ಮನಸ್ಸಿನಲ್ಲಿ ನೆಲೆಯೂರಿದ್ದು ಎಲ್ಲವೂ ಯಾತನಾಮಯವಾದ ಚಿತ್ರಣ ಮಾತ್ರ ಧೂಳು ಹಿಡಿದು ತುಕ್ಕು ಹಿಡಿದಿದ್ದ ಕತ್ತಿಯನ್ನು ದೇವರ ಕೋಣೆಯಿಂದ ಹೊರತಂದು “ನಿಮಗಾಗಿಯೇ ಹೊರಕ್ಕೆ ತರುತ್ತಿದ್ದೇನೆ” ಎಂದು ಹೇಳಿದವರ ಕಣ್ಣುಗಳಲ್ಲಿ ಒಂದು ಬಗೆಯ ತೃಪ್ತಿ ಹೊರಸೂಸುತ್ತಿತ್ತು.