“ಕಾಡಿನ ವಲ್ಲರಿ” ಇದೊಂದು ಸಾಮಾಜಿಕ ಕಾದಂಬರಿಯಾಗಿದ್ದು, ಇಲ್ಲಿನ ಪ್ರತಿಯೊಂದು ಪಾತ್ರಗಳು ಹಾಗೂ ಕಾದಂಬರಿಯ ವಸ್ತು ವಿಷಯ ಕಾಲ್ಪನಿಕವಾಗಿದೆ. ಲೇಖಕರು ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಗೂ ಜೀವ ತುಂಬಿ ಸೊಗಸಾಗಿ ಕೃತಿ ರಚನೆ ಮಾಡಿದ್ದಾರೆ. ಕಾದಂಬರಿಯ ಪ್ರಮುಖ ಪಾತ್ರ ಫಾರೆಸ್ಟ್ ಆಫೀಸರ್ ಪ್ರತಾಪ, ಅವಿಭಕ್ತ ಕುಟುಂಬದಲ್ಲಿ ಪ್ರತಾಪನ ಅಕ್ಕಳ ಮಗಳ ಪ್ರತಾಪನೊಂದಿಗೆ ಪ್ರಾರಂಭಗೊಳ್ಳುತ್ತದೆ. ಅರಣ್ಯ ಅಧಿಕಾರಿ ಪ್ರತಾಪನು ಆದಿವಾಸಿ ಜನರಿಗೆ ಶಿಕ್ಷಣ ಕೊಡಿಸಿ ಅವರನ್ನು ಮನುಷ್ಯರನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮತ್ತು ಕಾಡಿನ ಮಂಗಗಳ ಮದ್ಯದಲ್ಲಿ ಬೆಳೆದ ಕಾಡಿನ ವಲ್ಲರಿಯನ್ನು ನಾಡಿಗೆ ತಂದು ಅವಳಿಗೆ ಶಿಕ್ಷಣ ನೀಡಿ ಸಿಎಎಎಸ್ ಮಾಡಿಸುವ ಪ್ರಯತ್ನ ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ. ಅರಣ್ಯ ಸಂಪತ್ತನ್ನು ರಕ್ಷಣೆ ಮಾಡುವಲ್ಲಿ ಪ್ರಾಮಾಣಿಕತೆ, ಜವಾಬ್ದಾರಿ, ಧೈರ್ಯವು ಸರಕಾರಿ ಅಧಿಕಾರಿಗಳಿಗೆ ಮಾದರಿಯಾಗಿದೆ. ಅರಣ್ಯ ಅಧಿಕಾರಿ ಪ್ರತಾಪನು ಕಾಡಿನ ವಲ್ಲರಿಯನ್ನು ಮದುವೆ ಮಾಡಿಕೊಳ್ಳುವ ಪ್ರಸಂಗದೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಕೃತಿಯು ಸೊಗಸಾಗಿ ಮೂಡಿಬಂದಿದೆ. ಇಂಥ ಕೃತಿ ರಚಿಸಿದ ಅರ್ಜುನ ಬಿ. ನಾಕಮಾನ ನಿಜವಾಗಿ ಅಭಿನಂದನಾರ್ಹರು ಎಂದು ಚಿ.ಸಿ. ನಿಂಗಣ್ಣ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದ ಅರ್ಜುನ ಬಿ. ನಾಕಮಾನ ಅವರು ವೃತ್ತಿಯಿಂದ ಶಿಕ್ಷಕರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ ಹಾಗೂ ಸಣ್ಣಕಥೆಗಳನ್ನು ಬರೆಯುವ ಹವ್ಯಾಸ. ‘ಮಿಂಚಿ ಮಾಯವಾದ ಚುಕ್ಕಿಗಳು’ ಇವರ ಸಣ್ಣ ಕಥೆಗಳ ಸಂಕಲನ. ...
READ MORE