'ಕಾದೇ ಇರುವಳು ರಾಧೆ' ಎಂಬುದು ನಾಗ ಐತಾಳರ ಕಲ್ಪನೆಯಿಂದ ಮೂಡಿರುವ 'ಗದ್ಯಕಾವ್ಯ' ಎನ್ನಬಹುದಾದ ಕಿರುಕಾದಂಬರಿ, ಕೃಷ್ಣ-ರಾಧೆಯರ ಪ್ರೇಮ ನಾಡಿನ ಜನಕೋಟಿಯ ಮನಸ್ಸಿನಲ್ಲಿ ಮೂಡಿ, ಬೆಳೆದು ಚಿರಸ್ಥಾಯಿಯಾಗಿ ನಿಂತಿರುವ ಕಲ್ಪನಾ ವಿಲಾಸ, ಕೃಷ್ಣ ಕಥೆಯೇ ಆಗಿರುವ ಭಾಗವತದಲ್ಲಿ ರಾಧೆಯ ಹೆಸರೇ ಇಲ್ಲ. ಭಕ್ತಿಯ ಸ್ವರೂಪವನ್ನು ವರ್ಣಿಸಿರುವ 'ನಾರದ ಭಕ್ತಿಸೂತ್ರಗಳಲ್ಲೂ ರಾಧೆಯ ಉಲ್ಲೇಖವಿಲ್ಲ. 'ಯಥಾ ಪ್ರಜ ಗೋಪಿಕಾನಾಂ' ಎಂದು ಹೇಳಿ ಪ್ರೇಮಸ್ತರೂಪವಾದ ಭಕ್ತಿಗೆ ಗೋಪಿಯರ ಪ್ರೇಮವೇ ಪ್ರಮಾಣ ಎಂದಿದ್ದಾರೆಯೇ ಹೊರತು ಅಲ್ಲೂ ರಾಧೆಯನ್ನು ಪ್ರತ್ಯೇಕವಾಗಿ ಹೆಸರಿಸಿಲ್ಲ. ಮುಂದಿನ ಕಾಲದಲ್ಲಿ ಯಾವಾಗಲೋ ರಾಧೆಯ ಹೆಸರು ಕೃಷ್ಣನ ಜೊತೆಯಲ್ಲಿ ಎಷ್ಟರಮಟ್ಟಿಗೆ ಸೇರಿಕೊಂಡಿದೆ ಎಂದರೆ ಅವನು ರಾಧಾಕೃಷ್ಣನೆಂದೇ ಪ್ರಸಿದ್ದವಾಗಿದ್ದಾನೆಯೇ ಹೊರತು ಕೃಷ್ಣ ಅಥವಾ ಸತ್ಯಭಾಮಾ ಕೃಷ್ಣ ಎಂದಲ್ಲ! ಇದು ಎಷ್ಟರಮಟ್ಟಿಗೆ ಎಂದರೆ ರಾಧೆಯಿಲ್ಲದೆ ಕೃಷ್ಣನನ್ನು ಊಹಿಸಿಕೊಳ್ಳುವುದೇ ಕಷ್ಟವಾಗಿದೆ. ಅಂಥಾ ಪ್ರೇಮದ ಕುರಿತು, ರಾಧೆಯ ಕುರಿತು ಬರೆದಿರುವ ವಿಶೇಷ ಕೃತಿ ಇದು.
ಅಹಿತಾನಲ ಎಂಬ ಕಾವ್ಯನಾಮದಿಂದ ಬರೆಯುವ ವಿಜ್ಞಾನಿ ನಾಗ ಐತಾಳ ಅವರು ಜನಿಸಿದ್ದು 1932ರ ಅಕ್ಟೋಬರ್ 5ರಂದು. ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಅವರು ಸದ್ಯ ಕ್ಯಾಲಿಫೋರ್ನಿಯಾದ ಅರ್‍ಕಾಡಿಯಾದ ನಿವಾಸಿ ಆಗಿರುವ ಐತಾಳರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿಯೂ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಅವರು ಅಧ್ಯಯನ ಮಾಡಿದ್ದಾರೆ. ಭಾರತದಲ್ಲಿ ಪಿಎಚ್.ಡಿ. ಪದವಿ ಪಡೆದ ನಂತರ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಕೆನಡಾಕ್ಕೆ ಹೋದರು. ಅದಾದ ಮೇಲೆ ಅಮೆರಿಕೆಗೆ ಹೋದ ಅವರು 1975ರಿಂದ 2001ರ ವರೆಗೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ...
READ MORE