ಜ್ವಾಲಾಮುಖಿಯ ಮೇಲೆ

Author : ಬಸವರಾಜ ಕಟ್ಟೀಮನಿ

Pages 415

₹ 90.00




Year of Publication: 2011
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002

Synopsys

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುವರ್ಣ ಸಾಹಿತ್ಯ ಗ್ರಂಥಮಾಲೆಯಡಿ ಬಸವರಾಜ ಕಟ್ಟೀಮನಿ ಅವರ ಕಾದಂಬರಿ ‘ಜ್ವಾಲಾಮುಖಿಯ ಮೇಲೆ’ (2011) ಪ್ರಕಟಿಸಲಾಗಿದೆ. 1951ರಲ್ಲಿ (461-ಪುಟಗಳು) ಈ ಮೊದಲು ಸ್ಬತಃ ಲೇಖಕರೇ ಪ್ರಕಟಿಸಿದ್ದರು. ರಾಜಕೀಯ ಆಧರಿತ ಕಾದಂಬರಿ ಎಂದು ವಿಶ್ಲೇಷಕರು ಹೇಳಿದ್ದರೂ ಲೇಖಕರು ಮಾತ್ರ ಈ ಕಾದಂಬರಿಯನ್ನು ಸಾಮಾಜಿಕ ಕಾದಂಬರಿ ಎಂದೇ ಹೇಳಿದ್ದಾರೆ. ಏಕೆಂದರೆ, ಮನುಷ್ಯ ಯಾವಾಗಲೂ ರಾಜಕೀಯ ಜೀವಿ ಎಂಬ ಅರಿಸ್ಟಾಟಲನ ವಿಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಜೀವನದ ಎಲ್ಲ ಆಯಾಮಗಳಲ್ಲೂ ರಾಜಕೀಯ ಅಂಶಗಳನ್ನು ಕಾಣಬಹುದು ಎಂಬುದು ಅವರ ಗಟ್ಟಿ ಅಭಿಪ್ರಾಯ. ಆದ್ದರಿಂದ, ರಾಜಕೀಯ ಜೀವಿಗಳಾದ ಮಾನವರ ಸಾಮಾಜಿಕ ಜೀವನವೇ ಕಾದಂಬರಿಯ ವಸ್ತು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books