ಜೀವನ ಜೇನಾಯ್ತು

Author : ಹೆಚ್.ಜಿ. ರಾಧಾದೇವಿ

Pages 176

₹ 125.00




Year of Publication: 2016
Published by: ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ

Synopsys

ಕಾದಂಬರಿಗಾರ್ತಿ ಹೆಚ್.ಜಿ ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ‘ಜೀವನ ಜೇನಾಯ್ತು’. ಈ ಕಾದಂಬರಿಯಲ್ಲಿ ನಾಯಕಿ ವೈಜಯಂತಿಗೆ ಅವಳ ಆದರ್ಶ ಗುಣಗಳೇ ಅವಳಿಗೆ ಮುಳುವಾಗುತ್ತದೆ. ಶೋಷಣೆಯ ವಿರುದ್ಧ ಹೋರಾಡಲು ಹೋದ ಅವಳೇ ಶೋಷಣೆಗೆ ಒಳಗಾಗುವಾಗ ಅವಳ ಜೀವನ ಜೇನಾಗಲು ಸಹಕರಿಸಿದವರು ಯಾರು, ಹೇಗೆ? ಎಂಬುದೇ ಕಾದಂಬರಿಯ ತಿರುಳು.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books