ಲಿಖಿತಾ ಪಿ. ಪಟೇಲ್ ಅವರ ಕಾದಂಬರಿ-ಜನನಿ. ಬಾಡಿಗೆ ತಾಯಿಯ ಸಂಕಟಗಳು, ಬದುಕಿನಲ್ಲಿಯ ತೊಂದರೆಗಳು, ಮಗುವಿನ ಸ್ವಂತ ತಂದೆಯ ತೊಳಲಾಟ ಹೀಗೆ ವಿಷಯ ವಸ್ತುವನ್ನು ಆಧರಿಸಿದ ಕಾದಂಬರಿ. ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಲೇಖಕಿ ಲಿಖಿತ ಪಿ. ಪಟೇಲ್ ಅವರು ಮೂಲತಃ ಮೈಸೂರಿನವರು. ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂದೆ ಆರ್. ಪುರುಷೋತ್ತಮ, ತಾಯಿ ಬಿ. ಇಂದಿರಾ. ಬೆಂಗಳೂರು ವಿವಿಯ ಕಾನೂನು ಪದವೀಧರೆ. ಸದ್ಯ ಬೆಂಗಳೂರಿನಲ್ಲಿ ವಕೀಲೆ. ಸಾಹಿತ್ಯದಲ್ಲಿ ಆಸಕ್ತಿ. ಕೃತಿಗಳು: ಕಲ್ಕಿ, ಜನನಿ (ಕಾದಂಬರಿಗಳು) ...
READ MORE