ಡಾ. ಕೆ. ಶಿವರಾಮ ಕಾರಂತರ ’ಜಗದೋದ್ಧಾರ-ನಾ’ ಬದುಕಿನಲ್ಲಿ ನಂಬುಗೆ ಎಂಬುದು ತುಂಬಾ ಮುಖ್ಯ. ಸ್ವಲಾಭಕ್ಕಾಗಿ ನಂಬಿಕೆಯನ್ನು ಜನರು ಉಳಿಸಿಕೊಂಡಿರುತ್ತಾರೆ. ಅದನ್ನು ಜೀವನೋಪಾಯ ಎಂದು ತಿಳಿದವರೂ ಇದ್ದಾರೆ. ಕಾರಂತರು ಬರೆದ ಪ್ರಸ್ತಾವನೆಯಲ್ಲಿ ‘ತಮ್ಮ ಆರಾಧ್ಯ ದೇವತೆಯ ಮಾತಿನಲ್ಲಿಯೇ ಪರಸ್ಪರ ವಿರುದ್ಧವಾದ ತತ್ವ, ಸತ್ಯದ ಆಸುಪಾಸುಗಳು ಕಂಡರೂ, ಈ ನಂಬಿಕೆಯ ಭಕ್ತರಿಗೆ ತಿಳಿಯುವಂತಿಲ್ಲ. ಅವರ ನಡತೆಯ ಟೊಳ್ಳೂ ತಿಳಿಯುವುದಿಲ್ಲ. ಭಗವದ್ಗೀತೆ, ಉಪನಿಷತ್ತುಗಳ ಹೆಸರಿನಲ್ಲಿ ಅಲ್ಲಿಲ್ಲದ, ಇದ್ದುದ್ದಕ್ಕೆ ವಿರುದ್ಧವಾದ ಯಾವ ಮಾತನ್ನೆಂದರೂ ನಂಬುತ್ತಿರುವ ಜನರು ವಿದ್ಯಾವಂತರು ಎಂದು ತಿಳಿದಾಗ ಇನ್ನೂ ದುಃಖವಾಗುತ್ತದೆ’ ಎಂದು ಹೇಳುತ್ತಾರೆ.
ಕಥಾ ನಿರೂಪಕರೇ ಒಂದು ಪಾತ್ರವಾಗುವುದು ಈ ಕಾದಂಬರಿಯ ತಂತ್ರ. ದೇವರು-ಧರ್ಮದ ಹೆಸರಿನಲ್ಲಿ ಜನರು ಹಿಂದು ಮುಂದು ನೋಡದೇ ಸನ್ಯಾಸಿಗಳನ್ನು ನಂಬಿ ಮೋಸ ಹೋಗುವ ಚಿತ್ರಣವನ್ನು ಲೇಖಕರು ಈ ಕಾದಂಬರಿಯಲ್ಲಿ ಕೊಟ್ಟಿದ್ದಾರೆ. .
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1960ರಲ್ಲಿ (ಪುಟ:182) ಈ ಕಾದಂಬರಿಯನ್ನು ಪ್ರಕಟಿಸಿತ್ತು. ‘ಕರ್ಮವೀರ’ ವಾರಪತ್ರಿಕೆಯಲ್ಲಿ (1959) ಧಾರಾವಾಹಿಯಾಗಿಯೂ ಪ್ರಕಟಗೊಂಡಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE