ಇರಬೇಕಿತ್ತು ನೀ ಹತ್ತಿರ

Author : ಪ್ರಸನ್ನಾ ವಿ. ಚೆಕ್ಕೆಮನೆ

Pages 228

₹ 230.00




Year of Publication: 2022
Published by: ನೈದಿಲೆ ಪ್ರಕಾಶನ
Address: ಮೈಸೂರು

Synopsys

ಇರಬೇಕಿತ್ತು ನೀ ಹತ್ತಿರ ಪ್ರಸನ್ನ ಚೆಕ್ಕೆಮನೆ ಅವರ ಕಾದಂಬರಿಯಾಗಿದೆ. ವೈದೇಹಿ ಎನ್ನುವ ಪಾತ್ರ ಓದುವಾಗಲೇ ನಿಮ್ಮ ಕಣ್ಣ ಮುಂದೆ ಒಂದು ಆಕರತಿಯ ಹಾಗೆ ನಿಮ್ಮ ರೂಪು ತಳೆಯುವುದರಲ್ಲಿ ಅವರ ಕೈಚಳಕವಿದೆ. ಆಕೆಯ ತಹತಹಿಕ ವೈದೇಹಿ ಎನ್ನುವ ಹೆಸರು ಅದೇ ಕಾರಣಕ್ಕೆಇಟ್ಟರೇನೋ ಎನ್ನುವಷ್ಟು ಆಪ್ತವಾಗುತ್ತದೆ. ಕಾಸರಗೋಡು, ಕೇರಳಕ್ಕೆ ನೀವು ಹೋಗದೆಯೇ ಅಲ್ಲಿನ ಪರಿಸರವನ್ನು ಅನುಭವಿಸಬಹುದು. ಎಲ್ಲಿಯೂ ಕೆಡುಕನಿಸದು, ಅತಿ ರಂಜನೆಯಿಲ್ಲದೆ, ಭಾವನೆಗಳನ್ನೇ ಮೂಲವಾಗಿಸಿಕೊಂಡು ನವಿರಾಗಿ ಹಣಿದ ಕಥೆ ಆಗಷ್ಟೇ ಅರಳಿದ ದುಂಡು ಮಲ್ಲಿಗೆಗಳನ್ನು ಮೆಲ್ಲನೆ ಬಿಡಿಸಿ, ಜತನದಿಂದ ಮಾಲೆಮಾಡಿ, ಮೃದುವಾಗಿ ಸ್ಪರ್ಶಿಸಿ, ನಾಸಿಕದ ಬಳಿ ತೆಗೆದುಕೊಂಡು ಹೋದಾಗ ಸಿಗುವ ಸುಂದರ ಕಥಾಹಂದರ 'ಮಾಮ್ಸ್ ಪ್ರೆಸೊ ತಿಂಗಳ ವಿಶೇಷ ಸವಾಲಿನ ವಿಜೇತ ಬರಹ” ಎನ್ನುವ ಅಗ್ಗಳಿಕೆಗೂ ಪಾತ್ರವಾಗಿದೆ ಎಂದು ಶ್ವೇತಾ ಭಿಡೆ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಪ್ರಸನ್ನಾ ವಿ. ಚೆಕ್ಕೆಮನೆ
(05 January 1979)

ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ...

READ MORE

Related Books