ಇಳೆಗೂ ಮುನ್ನ...... ಹೆಸರು `ಇಳಾ’ ಅವಳು ಭೂಮಿ ತೂಕದ ಹುಡುಗಿ. ಸುಮ್ಮಾನ ಮನಸ್ಸಿನ ಹೆಣ್ಣು ಕುಲದ ವರ್ಷಧಾರೆ, ಕಣ್ಣುಗಳಲ್ಲಿ ಭೂಮಿಯ ಎಲ್ಲ ಸಂಭ್ರಮಗಳನ್ನು ಹೊತ್ತು ಕೊಂಡವಳು, ಗುಡುಗು, ಮಿಂಚು, ಮಳೆ, ಗಾಳಿ, ಬೆಳಕು, ಬೆಳದಿಂಗಳನ್ನು ಹೃದಯದಲ್ಲಿಯೇ ಪ್ರೀತಿಯ ಕಥೆಯಾಗಿ ಬರೆದಿಟ್ಟವಳು. ಅವಳ ಅಪೂರ್ವ ಪ್ರೇಮ ಕಥನವೇ `ಇಂತಿ ನಿನ್ನಾ ಇಳೆ!?’
ಇಂತಹ ಅಪೂರ್ವ ಹೆಣ್ಣು `ಇಳಾ’ ಮತ್ತು `ಸೂರ್ಯ’ ಎಂಬ ಫ್ರೆಂಚ್ ಗಡ್ಡದ ಸುಮ್ಮಾನ ಕಥೆಗಾರನ ನಡುವಿನ ಎರಡು ಹೃದಯಗಳ `ಪಿಸುಮಾತು’ ಈ ಕಾದಂಬರಿ .ಇಲ್ಲಿ ಬದುಕು ನಿಜಕ್ಕೂ ಒಂದು ಪ್ರೀತಿಯ ಕಣಜವಾಗಿ ತೆರೆದುಕೊಳ್ಳುತ್ತದೆ. ಪ್ರೀತಿಯನ್ನೇ ಹಾಸಿಹೊದ್ದು ಮಲಗುವ ಎರಡು ಹೃದಯಗಳ ಒಟ್ಟು ಸಹಯಾನ, ಪ್ರೇಮಯಾನ ಕೃತಿಯ ಒಟ್ಟು ಕಥಾ ಹಂದರವಾಗಿದೆ. ಪ್ರೀತಿಯ ಮುಂದೆ ಏನಕ್ಕೂ ಜಾಗವಿಲ್ಲ. ಹೀಗಾಗಿ `ಇಂತಿ ನಿನ್ನಾ ಇಳೆ’ ಖಂಡಿತಕ್ಕೂ ಯುವ ಮನಸ್ಸುಗಳ ಬೊಗಸೆ ತುಂಬಿಕೊಳ್ಳುವ ಪ್ರೀತಿ ಕಾದಂಬರಿಯಾಗಿದೆ. ಈ ಪ್ರೀತಿಯ ಬೆಳೆಯು ಈಗ ತೆನೆಯಾಗಿ `ಸೂರ್ಯ – ಇಳಾ’ ಹೆಸರಿನಲ್ಲಿ ಸಂಕ್ರಾಂತಿಯ ಸುಗ್ಗಿಯಾಗಿದೆ.
ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು 3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...
READ MORE