'ಇಳಂಗೋವನ್' ಜೋಗಿ ಅವರ 100ನೇ ಕೃತಿಯಾಗಿದೆ. ಇಲ್ಲಿ ಆಧ್ಯಾತ್ಮಿಕತೆ ಕುರಿತ ಬರಹಗಳನ್ನು ಕಾಣಬಹುದು. ನಾವೆಲ್ಲ ನಮ್ಮದೇ ಹಾದಿಯಲ್ಲಿ ಆಧ್ಯಾತ್ಮಿಕ ಪಯಣದಲ್ಲಿರುವವರು. ಇಳಂಗೋವನ್ ಹೇಳುವಂತೆ, “ಅಧ್ಯಾತ್ಮ ಎಲ್ಲವನ್ನೂ ಮೀರಬಲ್ಲದು, ದೇವರನ್ನೂ ಕೂಡ.” ಕಲ್ಪಿಸಿಕೊಂಡಷ್ಟೂ ಬ್ರಹ್ಮಾಂಡದ ವಿಸ್ತಾರ ಹೆಚ್ಚು ಎನ್ನುವ ಹಾಗೆ; ‘ಅದು’ ಎಂಬುದಿಲ್ಲ ಎಂಬ ತತ್ವವೂ ‘ಅದರ’ ಅಸ್ತಿತ್ವವನ್ನು ಒಪ್ಪಿಕೊಂಡ ಪಾತಳಿಯ ಮೇಲೆ ನಿಂತಿದೆ ಎನ್ನುವ ಹಾಗೆ; ಸಮುದ್ರದಲ್ಲೇ ಈಜಾಡಿಕೊಂಡು- ಉಸಿರಾಡಿಕೊಂಡು ಇರುವ ಮೀನು ಬದುಕಿನಲ್ಲಿ ಒಮ್ಮೆಯಾದರೂ ಸಮುದ್ರ ಕಾಣಬೇಕು ಎಂದು ಹಂಬಲ ಪಡುವ ಹಾಗೆ ಅಲೌಕಿಕವು ಲೌಕಿಕವನ್ನು ನಿತ್ಯ ಪೊರೆಯುತ್ತಿದೆ. ಕಲೆಯೆಂಬುದು ಈ ‘ಅರಸುವ’ ಕ್ರಿಯೆಯಲ್ಲಿ ಒದಗಿ ಬರುವ ಒಂದು ಸಲಕರಣೆ. ಮೌನವೂ ಮತ್ತೊಂದು ಸಲಕರಣೆ. ಈ ಪುಸ್ತಕದ ಕಡೆಯ ಅಧ್ಯಾಯದಲ್ಲಿ ಜೋಗಿಯವರು ಪಾಶ್ಚಾತ್ಯ ತತ್ವಜ್ಞಾನಿಗಳ ಸಾಲಿನಲ್ಲಿ ಮಹಿಳೆಯರ ಗೈರುಹಾಜರಿಯ ಬಗ್ಗೆ ಸೂಕ್ತ ಪ್ರಶ್ನೆಯನ್ನೆತ್ತಿದ್ದಾರೆ. ಅವರೇ ಗುರುತಿಸಿದ ಹಾಗೆ ಭಾರತದಲ್ಲೇ ಅಲೌಕಿಕತೆಯ ಬಗ್ಗೆ ಆಸಕ್ತಿಯುಳ್ಳ ಮಹಿಳೆಯರು ವಚನಕಾರ್ತಿಯರ, ಶರಣೆಯರ, ಜನಪದ ಕಲಾವಿದೆಯರ ರೂಪದಲ್ಲಿ ಕಾಣಸಿಗುತ್ತಾರೆ.
ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸೂರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಯ್ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...
READ MORE