ಲೇಖಕ ಕೃಷ್ಣಮೂರ್ತಿ ಪುರಾಣಿಕ ಅವರ ಸಾಮಾಜಿಕ ಸರಸ ಕಾದಂಬರಿ-ಹೊಸ ಬಾಳು. ಜೀವನ ವಿಸ್ತಾರವಾಗಿರುವಂತೆ ವೈವಿಧ್ಯಮಯವೂ ಆಗಿದೆ. ಅದಕ್ಕೊಂದು ಗುರಿ ಇದೆ. ನಿರ್ದಿಷ್ಟ ಮಾರ್ಗವೂ ಇದೆ. ಅದನ್ನು ಕಾಣುವುದು ಮುಖ್ಯ. ಈ ಮಾರ್ಗವು ಅಂಕು ಡೊಂಕಾಗಿಯೂ ಇರುತ್ತದೆ. ಸಂಸ್ಕಾರ ಬಲದಿಂದ ಅದನ್ನು ಸರಳವಾಗಿ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಿಕೊಳ್ಳಲು ಜೀವನವು ಆದರ್ಶಮಯವಾಗಿರಬೇಕು. ಸರಸ-ವಿರಸಗಳನ್ನು ತೂಗಿ ನೋಡಿ, ಬದುಕು ಸಾಗಿಸುವ ಸಹನೆಯೂ ಬೇಕು. ಇಂತಹ ನೀತಿ ಪ್ರಧಾನ ಕಾದಂಬರಿಯಾಗಿದ್ದು, ಓದುಗರನ್ನು ತನ್ನತ್ತ ಸೆಳೆಯುವ ಆಕರ್ಷಣೀಯ ಶೈಲಿ ಹೊಂದಿದೆ.
ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು ಬೆಳ್ಳೆತೆರೆ ಕಂಡಿವೆ. 'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...
READ MORE