ಹೊದ್ದಿಕೆಯಲ್ಲೊಂದು ಮಿಡಿನಾಗರ ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಯಾಗಿದೆ. ಹೊದ್ದಿಕೆಯಲ್ಲೊಂದು ಮಿಡಿನಾಗರ ವಿಮಾನ ನಿಲ್ದಾಣದಲ್ಲಿ ಎರಡು ಭೂತಗಳು, ನಾಲ್ವರು ಕುಡುಕರು ಸೇರಿ ಹೇಳುವ ಕಾಕ್ ಟೇಲ್ ಕಥೆಗಳು. ಪ್ರೇಮದ ವ್ಹಿಸ್ಕಿ-ರೊಮಾನ್ಸ್ ಸೋಡಾಬೀಭತ್ಸದ ಗಾಜಿನ ಲೋಟದಲ್ಲಿ ಭಯಾನಕ ಐಸ್ ಹಾಕಿ ಮುಂದೆ ಇಟ್ಟರೆ ಕುಡಿದುಬಿಟ್ಟು ಹಾಸ್ಯದ ಹ್ಯಾಂಗೋವರ್‌ನಲ್ಲಿ ಮುಳುಗಿ ಹೋಗುವ ಸಮಯಕ್ಕೆ ವಿಮಾನ ಹೊರಡುವ ಟೈಮ್ ಆಗಿತ್ತು!ವಿಮಾನದ ಒಳಗೆ ಮೂವರೂ, ವಿಮಾನದ ಹೊರಗೆ ಇಬ್ಬರೂ ಒಂದೇ ಸಲಕ್ಕೆ ಹಾರಿದರಂತೆ! ಏನಾ ಕಥೆ? ಏನಾ ಆಸಕ್ತಿಕರ ನಿರೂಪಣೆ. ಬಹಳ ಕುತೂಹಲ ತುಂಬಿರುವ ಕಾದಂಬರಿಯಾಗಿದೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE