‘ಹಾವಿನ ಮನೆ’ ಅನು ಬೆಳ್ಳೆ ಅವರ ಪತ್ತೇದಾರಿ ಕಾದಂಬರಿ. ಹಣ ಯಾರಿಗೆ ತಾನೆ ಕಹಿ? ಅವನಿಗೊಂದು ದೊಡ್ಡ ಕನಸಿತ್ತು. ಸಮಾಜದಲ್ಲಿ ತಾನೂ ಒಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳಬೇಕು, ಕೈ ತುಂಬಾ ಹಣ ಗಳಸಬೇಕೆನ್ನುವುದು. ಆದರೆ ಅರ್ಧ ಆಯಸ್ಸು ಕಳೆದೇಹೋಯಿತು! ಇನ್ನು ಉಆದ ಆಯಸ್ಸಿನಲ್ಲಿ ತನ್ನ ಕನಸು ನನಸಾಗುವುದಿಲ್ಲವೆನ್ನುವುದು ಖಾತ್ರಿಯಾಗುತ್ತಲೇ ಒಂದು ಯೋಜನೆ ಹಾಕಿಕೊಂಡ. ತಾನು ಯಾರಿಗಾಗಿ ಇಷ್ಟು ವರ್ಷ ದುಡಿದನೋ ಅವರಿಂದಲೇ ಸುಲಭದಲ್ಲಿ ಹಣ ಲಪಟಾಯಿಸ ಹೊರಟ. ಯಶಸ್ವಿಯೂ ಆದ. ಮುಂದೆ....!? ಮಾಫಿಯಾ ಅವನ ಹಿಂದೆ ಚಿತ್ತು. ಅವನು ಓಟಕ್ಕಿತ್ತ. ಓಡುತ್ತಲೇ ಇದ್ದ.... ಅಚಾನಕ್ಕಾಗಿ ಹೆಣ್ಣೂಬ್ಬಳ ಪ್ರೀತಿಗೆ ಬಿದ್ದ. ಮುಂದೇನಾಯ್ತು.... ಮಾಫಿಯಾ ಕೈಗೆ ಸಿಕ್ಕನೇ... ತಪ್ಪಿಸಿಕೊಂಡನೇ. 'ಹಾವಿನ ಮನೆ' ಹೊತ್ತು ನೀವೇ ಓದಿ ನೋಡಿ...ಇಂಥಾ ಕುತೂಹಲಭರಿತ ಕಥಾವಸ್ತುವನ್ನೊಳಗೊಂಡ ಪತ್ತೇದಾರಿ ಕಾದಂಬರಿ ‘ಹಾವಿನಮನೆ’
ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ...
READ MORE