ಸಿನಿಮಾ ಸಂಭಾಷಣೆಕಾರರಾಗಿ ಹೆಸರು ಮಾಡಿರುವ ಡಾ.ಬಿ.ಎಲ್. ವೇಣು ಅವರು, ಈ ಕಾದಂಬರಿಯೂ ಸಿನಿಮೀಯ ಶೈಲಿಯಲ್ಲಿಯೇ ಇದೆ. ಬಲಪಂಥೀಯ ಒಲವಿರುವ ನಾಯಕ ಪ್ರವೀಣ್ ಕುಮಾರ್ ಹಾಗೂ ಪ್ರಗತಿಪರ ಚಿಂತನೆಯ ನಾಯಕಿ ಪರಿಮಳಾ ಹೇಗೆ ರಾಜಕಾರಣಿಗಳ ದಾಳವಾಗುತ್ತಾರೆ ಎಂಬುದೇ ಕಾದಂಬರಿಯ ಹೂರಣ. ಮೇಲ್ಜಾತಿಯ ನಾಯಕಿ, ಕೆಳಜಾತಿಯ ನಾಯಕನ ಬದುಕಿನ ವೈರುಧ್ಯಗಳ ಜತೆಗೆ ಅಧಿಕಾರದಾಹಿ ರಾಜಕಾರಣಿಯ ವಿಕೃತ ಮನಸೂ ಇಲ್ಲಿದೆ. ಗೋವಿನ ಮುಖವಾಡ ತೊಟ್ಟ ಸಮಾಜಘಾತುಕರ ಚಿತ್ರಣವನ್ನು ನೀಡುತ್ತದೆ.
ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...
READ MORE