ಗಡಿ ಪಾಲಾದವರು

Author : ಮಾಲ್ಗುಡಿ ಶಿವ

Pages 679

₹ 550.00




Year of Publication: 2021
Published by: ಕೇಂದ್ರ ಸಾಹಿತ್ಯ ಅಕಾಡೆಮಿ
Address: ಬೆಂಗಳೂರು ಯೂನಿವರ್ಸಿಟಿ ಸಂಪಗಿ ರಾಮನಗರ,ಬೆಂಗಳೂರು 560001
Phone: 99029 48675

Synopsys

‘ಗಡಿ ಪಾಲಾದವರು’ ಮಾಲ್ಗುಡಿ ಶಿವ ಅವರ ಅನುವಾದಿತ ಕೃತಿಯಾಗಿದೆ. ದಂಗೆಯ ದಳ್ಳುರಿಯು ತನ್ನ ಕೆನ್ನಾಲಿಗೆಯಿಂದ ದಶದಿಕ್ಕುಗಳನ್ನೂ ನೇವರಿಸುತ್ತಿದೆ. ದೇಶವನ್ನೊಡೆಯುವ ಭಯಾನಕ ಘೋಷಣೆಗಳು ಮಾರ್ದನಿಸುತ್ತಿವೆ. ಧಮಿಯಾಲ್‌ನ ನಿವಾಸಿಗಳು ವಿಷವಾಯುವಿನಂತೆ ಹಬ್ಬಿದ ಗಾಳಿಸುದ್ದಿಗಳನ್ನು ಕೇಳಿಯೂ ಮೈ ಮರೆತು ಕುಳಿತಿದ್ದಾರೆ. ಹಿಂದೆಂದೂ ಕಂಡು ಕೇಳರಿಯದ ಸಂಗತಿಗಳು, ರಾವಂಡಿ ಶಹರದಿಂದ ಕೈಯ್ಯಳತೆಯ ದೂರದಲ್ಲಿನ ಧಮಿಯಾಲ್ ಗ್ರಾಮವು ಸಾಗರದ ನಡುವಲ್ಲಿನ ಪುಟ್ಟ ನಡುಗಡ್ಡೆಯಂತೆ ಕಾಣುತ್ತಿದೆ. ಸುತ್ತಲೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತ ಆಪೋಶನಗೈಯುತ್ತಿರುವ ಅಗ್ನಿಜ್ವಾಲೆ...! ನೆತ್ತರಲ್ಲಿ ಗೀಚಿ ಎಳೆದ ರೇಖೆಯ ಒಂದು ಬದಿಯಲ್ಲಿ ಸ್ನೇಹ-ಪ್ರೇಮ ಭರಿತ ಜೀವನವು ತನ್ನ ಅಬೋಧ ಕಣ್ಣುಗಳೊಂದಿಗೆ ನೋಡುತ್ತಾ ನಿಂತಿದೆ. ಗೆರೆಯ ಇನ್ನೊಂದು ಪಾರ್ಶ್ವದಲ್ಲಿ ಮತಾಂಧತೆಯ ಹುಚ್ಚು ಹತ್ತಿದ ಕೈಗಳಲ್ಲಿ ಹಿಡಿದ ತಲವಾರುಗಳು, ಅವುಗಳ ಹಿಂದೆ ಕುಟಿಲ ಕುತಂತ್ರಗಳ ಹುನ್ನಾರಗಳು, ಪ್ರಚೋದನೆಗಳು, ತಯಾರಿಗಳು, ದಂಗೆಗಳು ಇನ್ನು ಕೊಡಲಿ ಕುಡುಗೋಲುಗಳ ಬಳಕೆ ಹಳ್ಳಿಮಂದಿಗೇನು ಹೊಸದಲ್ಲ. ತಿಳಿಯದಿದ್ದ ವಿಷಯವೇನೆಂದರೆ, ತಮ್ಮವರನ್ನೇ ಕೊಲ್ಲುವ ಬಗೆ ಹೇಗೆಂಬುದಷ್ಟೆ” ಈ ಕಾದಂಬರಿಯೊಂದು ಒಣಗಿದ ಐತಿಹಾಸಿಕ ದಸ್ತಾವೇಜಲ್ಲ, ಹಸಿಹಸಿಯಾದ ಮಾನವೀಯ ಸಂಬಂಧಗಳ ಕಥೆ. ಇದರೊಳಗೆ ಕೇವಲ ಮನುಷ್ಯರಷ್ಟೇ ಸಾಯುವುದಿಲ್ಲ, ಮೌಲ್ಯಗಳೂ ನುಚ್ಚು ನೂರಾಗುತ್ತವೆ. ಕೆಳಗೆ ಬಿದ್ದವನು ಕೇವಲ ಹಿಂದುವೋ, ಮುಸಲ್ಮಾನನೋ ಅಥವಾ ಸಿಬ್ಬನಷ್ಟೇ ಅಲ್ಲ, ಹೆಣ್ಣು ಗಂಡೆಂಬ ಬೇಧವಿಲ್ಲದ ಮನುಷ್ಯತ್ವ ಕೂಡ. (ಬೆನ್ನುಡಿ)

About the Author

ಮಾಲ್ಗುಡಿ ಶಿವ

ಮಾಲ್ಗುಡಿ ಶಿವ ಎಂಬ ನಾಮಧೇಯದೊಂದಿಗೆ ಬರಹ ಕೃಷಿ ನಡೆಸುತ್ತಿರುವ ಶಿವ ಕುಮಾರ್ ರವರು ಮೂಲತಃ ತುಮಕೂರು ಜಿಲ್ಲೆಯ ಸಿದ್ಧಗಂಗೆಯವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂತ್ರಜ್ಞಾನ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸದೊಂದಿಗೆ ವಾಹನೋದ್ಯಮದಲ್ಲಿ ಎರಡು ದಶಕಗಳಿಗೂ ಮೀರಿದ ವೃತ್ತಿ ಜೀವನ ನಡೆಸಿದ್ದಾರೆ. ಅನುವಾದ, ಕವಿತೆ, ಸಣ್ಣ ಕಥೆಗಳು ಮತ್ತು ಹೈಕುಗಳ ರಚನೆಯೊಂದಿಗೆ ಕಂಠದಾನ, ಇತಿಹಾಸ ಹಾಗೂ ವೇದಾಂತ ಇವರ ಆಸಕ್ತಿಯ ವಿಷಯಗಳು. ಹಿಂದಿ, ಪಂಜಾಬಿ ಮತ್ತು ಆಂಗ್ಲ ಭಾಷೆಯ ಅನುವಾದಗಳಲ್ಲಿ ಅಭಿರುಚಿ ಹೊಂದಿರುವ ಇವರ ಚೊಚ್ಚಲ ಕೃತಿ "ಗಡಿ ಪಾಲಾದವರು" ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ಐತಿಹಾಸಿಕ ಕಾದಂಬರಿ. ...

READ MORE

Related Books