ಲೇಖಕಿ ಪ್ರಭಾವತಿ ಎಸ್. ವಿ ಅವರ ಕೃತಿ ‘ಗಾರ್ಗಿ’. ಕೃತಿಯ ಹುಟ್ಟಿನ ಬಗ್ಗೆ ಹೇಳಿರುವ ಲೇಖಕಿ,ಗಾರ್ಗಿಯಂತಹ ಬ್ರಹ್ಮ ವಾದಿನಿಯ ಬಗ್ಗೆ ಬರೆಯುವ ಮೇಧಾವಿ ತನವಾಗಲೀ, ಧೈರ್ಯ ವಾಗಲೀ ನನಗೆ ಇರಲಿಲ್ಲ . ಆದರೆ ನನ್ನ ಅಹಲ್ಯಾ ಓದಿದ ಮಲ್ಲೆಪುರಂ ವೆಂಕಟೇಶ ಅವರು ನಿಮ್ಮ ಬರವಣಿಗೆಯ ಶೈಲಿಗೆ ಗಾರ್ಗಿಯ ಕತೆ ತುಂಬಾ ಸೂಕ್ತವಾದುದು, ಯಜುರ್ವೇದ, ಅದರ ಅರವತ್ತೆಂಟು ಉಪನಿಷತ್ತು ಗಳು ಮತ್ತು ದೇವುಡು ಅವರ ಮಹಾದರ್ಶನ ಓದಿ ಅಂದರು. ಹಾಗೆ ಹುಟ್ಟಿದವಳು " ಗಾರ್ಗಿ " . ಪ್ರಜಾಮತ ಪುನರಾರಂಭವಾಗಿತ್ತು. ಇದು ಧಾರಾವಾಹಿಯಾಗಿ ಬರಬೇಕಿತ್ತು. ಪತ್ರಿಕೆ ನಿಂತು ಹೋಯಿತು . ಹಸ್ತಪ್ರತಿ ಕಳೆದು ಹೋಗಿ ಮತ್ತೆ ಸಿಕ್ಕಿ ಪವಾಡ ಸದೃಶ ವಾಗಿ ಪ್ರಕಟವಾದವಳು " ಗಾರ್ಗಿ " ಮೊದಲ ಮುದ್ರಣ 2007 .ಎರಡನೇ ಮುದ್ರಣ 2019
ಸ್ತ್ರೀವಾದಿ ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭಿಸಿದ ಅವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ...
READ MORE