ಕವಿ. ವಿ.ಕೃ.ಗೋಕಾಕ ಅವರು ಬರೆದ ಆರು (ಇಜ್ಜೋಡು, ಏರಿಳಿತ, ಅಂತ:ಸತ್ವ, ಪ್ರೀತಿಯ ಯೋಗ ಮಾಯೆ, ಸಮುದ್ರಯಾನ, ನಿರ್ವಹಣ) ಕಾದಂಬರಿಗಳ ಪೈಕಿ ‘ಏರಿಳಿತ’ ವೂ ಒಂದು. ‘ಇಜ್ಜೋಡು’ ಕಾದಂಬರಿಯ ನಾಲ್ಕನೇಯ ಭಾಗವನ್ನು ‘ಏರಿಳೀತ’ ಶಿರ್ಷಿಕೆಯಡಿ ಲೇಖಕರು ಪ್ರಕಟಿಸಿದ್ದರು. ಇದರಲ್ಲಿ 67-81 ಪ್ರಕರಣಗಳಿದ್ದವು. (ಪುಟಗಳು: 589-731 ಅಂದರೆ 142)
‘ನವಯುಗ ಪ್ರವರ್ತಕ ನರಹರಿ’ ಒಳಗೊಂಡು ಪುರ್ಯೋಸಿದ ಐದು ಭಾಗಗಳಲ್ಲಿ ಪ್ರಕಟವಾಗುವ ‘ಸಮರಸವೇ ಜೀವನ’ ಎಂಬ ಬೃಹತ್ ಶೀರ್ಷಿಕೆಯಡಿ ಎರಡನೇ ಭಾಗವಿದು (ಪ್ರಕರಣಗಳು: 48-81) ಸಮರಸವೇ ಜೀವನ -ಭಾಗ-1ರಲ್ಲಿ ಇಜ್ಜೋಡು ಹಾಗೂ ಏರಿಳಿತ ಕಾದಂಬರಿಗಳನ್ನು ಸೇರಿಸಿದೆ. ಸಮರಸವೇ ಜೀವನ ಎಂಬ ವಿಶಾಲ ತತ್ವವೇ ಎಲ್ಲ ಕಾದಂಬರಿಗಳ ಜೀವಾಳ.
ಮೈಸೂರಿನ ಸುರುಚಿ ಪ್ರಕಾಶನವು ನಂತರ ಅಂದರೆ 1979ರಲ್ಲಿ ಈ ಕೃತಿಯನ್ನು ಪ್ರಕಟಿಸಿತ್ತು. ಆಗ 264 ಪುಟಗಳಿದ್ದವು.
‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...
READ MORE