ಸುನಂದಾ ಕಡಮೆ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ-ಎಳನೀರು. ಕತೆಗಳ ಕುರಿತು ಬಾಲ್ಯದಿಂದಲೂ ಆಸಕ್ತಿಯಿದ್ದ ಶಿಕ್ಷಕಿಯೊಬ್ಬರು ತಮ್ಮ ನಿತ್ಯದ ದಾರಿಯಲ್ಲೂ ಮಕ್ಕಳನ್ನು ಆ ನಿಟ್ಟಿನಲ್ಲಿ ತುಡಿಯಲು ಹಚ್ಚುವ ಕಥನವೇ ಈ ಕಾದಂಬರಿಯ ವಿಸ್ತಾರದಲ್ಲಿದೆ. ಶಿಕ್ಷಕಿಯ ಬಾಲ್ಯದ ಅನುಭವಗಳನ್ನು ಕೂಡ ಒಂದು ಕತೆಯ ರೂಪದಲ್ಲೇ ಮಂಡಿಸಿದ್ದಾರೆ ಲೇಖಕಿ. ಬಾಲ್ಯದ ಅನುಭವಗಳು ದೊಡ್ಡವರಿಗೂ ಆಪ್ಯಾಯಮಾನವಾಗುವಂತಿವೆ.
ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ...
READ MORE