ಮಹದ್ಗ್ರಂಥದ ಆಯಾಮ ಹೊಂದಿರುವ ಈ ಕಾದಂಬರಿಯ ಬದುಕು ಪಾತ್ರಗಳನ್ನು ದಟ್ಟವಾಗಿ ಹರಡಿಕೊಂಡಿದೆ. ಎಲ್ಲ ಪಾತ್ರಗಳೂ ತಮ್ಮದೇ ಪಾತ್ರ ಪೋಷಣೆಯ ಮೂಲಕ ನಮ್ಮಿಂದಿಗೆ ಮಾತನಾಡುತ್ತವೆ. ನಾಶವಾಗುತ್ತಿರುವ ಗ್ರಾಮಸಂಸ್ಕೃತಿಯನ್ನು ಈ ಕಾದಂಬರಿ ಬಹುನೆಲೆಗಳಲ್ಲಿ ಚರ್ಚಿಸುತ್ತದೆ. ಗ್ರಾಮಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ಜಾತಿ ಮತ್ತು ಲಿಂಗ ರಾಜಕಾರಣದ ಚರ್ಚೆ ಕಾದಂಬರಿಯ ಮುಖ್ಯ ಗುರಿಯೇನೋ ಎಂದೆನಿಸುತ್ತದೆ. ಕಲ್ಲಮ್ಮ ಮತ್ತು ಪುಟ್ನಂಜಿ ಕಾದಂಬರಿಯ ಎರಡು ಮುಖ್ಯ ಪಾತ್ರಗಳಾಗಿವೆ. ಜಾತಿ, ಒಳಜಾತಿಗಳ ನಡುವಿನ ತಿಕ್ಕಾಟಗಳನ್ನು ಕಲ್ಲಮ್ಮನ ಪಾತ್ರದ ಮೂಲಕ ಕಾದಂಬರಿಕಾರ್ತಿ ನಿರೂಪಿಸುತ್ತಾರೆ. ಕುರುಬ, ದಲಿತ ಜಾತಿಗಳೊಳಗೂ ಒಳ ಸಂಘರ್ಷಗಳಿವೆ. ಜಾತಿ ಶೋಷಣೆಗಳಿವೆ. ಹಾಗೆಯೇ ಮಹಿಳೆಯರು ಎಲ್ಲ ಜಾತಿ ಗಳಲ್ಲೂ ಶೋಷಿತರಾಗುವ ಮತ್ತೊಂದು ಉಪಜಾತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಗ್ರಾಮವೆನ್ನುವುದು ಹೊರನೋಟಕ್ಕೆ ಸುಂದರ ವಾದ ಆದರ್ಶವಾದರೂ ಅದರೊಳಗಿರುವ ಜಾತಿ, ಲಿಂಗ ರಾಜಕಾರಣ ಅತ್ಯಂತ ಹೇಯ ವಾದುದು. ಸಾಧಾರಣವಾಗಿ ಒಂದು ಗ್ರಾಮಸಂಘರ್ಷವನ್ನು ಮಹಿಳಾ ಲೇಖಕಿಯರು ಬರೆದಿರುವುದು ಕಡಿಮೆ. ಪುರುಷನ ಕಣ್ಣಲ್ಲಿ ಗ್ರಾಮ ಮತ್ತು ಅಲ್ಲಿನ ಜಾತಿ ರಾಜಕಾರಣಗಳನ್ನು ನೋಡುವುದಕ್ಕೂ, ಮಹಿಳೆಯ ಕಣ್ಣಲ್ಲಿ ನೋಡುವುದಕ್ಕೂ ವ್ಯತ್ಯಾಸವಿದೆ. ಇಲ್ಲಿ ಸುನಂದಮ್ಮ ಜಾತಿ ಮತ್ತು ಲಿಂಗ ರಾಜಕಾರಣವನ್ನು ಕಲ್ಲಮ್ಮ, ಪುಟ್ನಂಜಿ, ತಿಮ್ಮಿ, ಜಬ್ಬಿ ಮೊದಲಾದ ಪಾತ್ರಗಳ ಮೂಲಕ ನೋಡಿದ ರೀತಿ ಈ ಕಾರಣಕ್ಕೆ ಈ ಕೃತಿಯು ಮುಖ್ಯವಾಗಿದೆ.
ಸಂವೇದನಾಶೀಲ ಸ್ತ್ರೀವಾದಿ ಲೇಖಕಿ ಪ್ರೊ.ಆರ್.ಸುನಂದಮ್ಮ ಅವರು ಮೂಲತಃ ಕೋಲಾರ ಜಿಲ್ಲೆಯ ವೆಂಕಟಾಪುರದವರು. ಕತೆ, ಕಾವ್ಯ, ಕಾದಂಬರಿ, ಸಂಶೋಧನಾ ಮತ್ತು ವೈಚಾರಿಕ ಲೇಖನಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ 2003ರಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇರ್ಪಡೆಯಾದ ಅವರು, ಉಪನ್ಯಾಸಕಿಯಾಗಿ, ರೀಡರ್ ಆಗಿ, ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನಕದಾಸ ಅಧ್ಯಯನ ಪೀಠದ ಸಂಯೋಜಕರಾಗಿ, ಎರಡು ಅವಧಿಗೆ ಆರ್ಥಿಕ ಅಧಿಕಾರಿಗಳಾಗಿ, ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಯಾಗಿರುವ ದೇಶದ ಮೊಟ್ಟಮೊದಲ ಮಹಿಳಾ ವಸ್ತು ...
READ MORE