’ದೂರ ಸರಿದರು’ ಕನ್ನಡದ ಹೆಸರಾಂತ ಕಾದಂಬರಿಗಾರರಾದ ಎಸ್.ಎಲ್. ಭೈರಪ್ಪನವರು ೧೯೬೨ರಲ್ಲಿ ರಚಿಸಿದ ಒಂದು ಕಾದಂಬರಿಯಾಗಿದೆ.
ಮೈಸೂರಿನ ಒಂದು ಕಾಲೇಜಿನ ಸಾಹಿತ್ಯ ಹಾಗೂ ತತ್ವಶಾಸ್ತ್ರ ವಿದ್ಯಾರ್ಥಿಗಳ ಪ್ರೇಮಕಥೆಗಳನ್ನು ಒಳಗೊಂಡ ಕಾದಂಬರಿ ಇದಾಗಿದೆ. ಸಂಬಂಧದಲ್ಲಿ ಹೇಗೆ ಹೆಣ್ಣು- ಗಂಡಿನ ಸಮಾನತೆ, ಸಾಹಿತ್ಯ, ತತ್ವ ಮುಂತಾದವು ಪಾತ್ರ ವಹಿಸುತ್ತವೆ ಎಂಬುದು ಈ ಕಾದಂಬರಿಯ ಮುಖ್ಯ ವಸ್ತುವಾಗಿದೆ. ಪ್ರೇಮವನ್ನು ಸಾಹಿತ್ಯ , ತತ್ವದ ವಿದ್ಯಾರ್ಥಿಗಳು ವಿಭಿನ್ನವಾಗಿ ಅರ್ಥೈಸಿಕೊಳ್ಳುತ್ತಾರೆ ಎಂಬುದು ಭೈರಪ್ಪನವರ ಪ್ರತಿಪಾದನೆಯಾಗಿದೆ. ಸಚ್ಚಿದಾನಂದ, ವಸಂತ, ಉಮಾ, ರಮಾ, ವಿನತಾ ಈ ಕಾದಂಬರಿಯ ಮುಖ್ಯ ಪಾತ್ರ ವರ್ಗ.
ಗಂಡುಹೆಣ್ಣಿನ ಸಂಬಂಧದ ವಿಶ್ಲೇಷಣೆಯು ಪ್ರಪಂಚದ ಎಲ್ಲ ಪ್ರಮುಖ ಸಾಹಿತ್ಯ ಕೃತಿಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.ನಲವತ್ತೆಂಟು ವರ್ಷ ಕಳೆದರೂ ಪದೇ ಪದೇ ಮರುಮುದ್ರಣ ಕಾಣುತ್ತಾ ಸಾಗಿರುವ ಈ ಕೃತಿಯ ಸಶಕ್ತ ಸನ್ನಿವೇಶ, ಜೀವಂತ ಪಾತ್ರ ಚಿತ್ರಣ ಮೊದಲಾದ ಗುಣಗಳಿಂದ ಓದುಗರ ನೆನಪಿನಲ್ಲಿ ಮುಳುಗಿಸುತ್ತದೆ.
ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ...
READ MORE