ಧರ್ಮರಹಸ್ಯ ಅವಾ ಸತ್ಸಮಾಗಮ-ಪ್ರಭಾವ ಕೃತಿಯನ್ನು ಗಳಗನಾಥರು ಬರೆದಿದ್ದಾರೆ. ಧರ್ಮದ ಅಂತರಂಗವು ಅವಿನಾಶಿ. ಶಾಶ್ವತವೂ, ಸನಾತನವೂ, ಸತ್ಯವೂ ಆಗಿದೆ. ಈ ಎಲ್ಲವುಗಳ ರಕ್ಷಣೆಗೆ ಧರ್ಮದ ಬಾಹ್ಯರಂಗವೂ ಅವಶ್ಯ.. ಈ ಬಾಹ್ಯ ಕವಚವು ಧರ್ಮದಿಂದ ಧರ್ಮಕ್ಕೆ ಭಿನ್ನವಾಗಿರುತ್ತದೆ. ಅಂದಮಾತ್ರಕ್ಕೆ ಧರ್ಮಗಳೇ ಭಿನ್ನವಲ್ಲ. ಅವುಗಳ ಅಂತರಂಗಗಳು ಒಂದೇ. ಬ್ರಾಹ್ಮಣರು ಹಣೆಗೆ ನಾಮ ಧರಿಸುವಂತೆ ಮುಸಲ್ಮಾನರಿಗೆ ಇರದು. ಲಿಂಗಾಯತರಿಗೆ ವಿಭೂತಿ ಇರುವಂತೆ ವೈಷ್ಣವರಿಗೆ ಮುದ್ರಾಧಾರಣ. ಹೀಗೆ ಬಾಹ್ಯ ಲಕ್ಷಣಗಳು ಬೇರೆ ಬೇರೆ. ಇವುಗಳ ವಿಭಿನ್ನತೆಯಿಂದಾಗಿ ಪರಸ್ಪರರಲ್ಲಿ ಅಸೂಯೆಗಳು ಎದ್ದುಕಾಣುತ್ತವೆ. ಆದರೆ. ಧರ್ಮದ ಮೂಲ ರಹಸ್ಯ ಒಂದೇ ಎಂಬುದು ತಿಳಿಯಲಾರದೇ ಹೋಗುತ್ತಾರೆ ಎಂಬುದು ಈ ಕಾದಂಬರಿಯ ಮೂಲ ಅಂಶ.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE