ರೂಪಕಗಳ ಸರಮಾಲೆಗಳನ್ನು ಕಾದಂಬರಿಯಲ್ಲಿ ಸರಾಗವಾಗಿ ಪೋಣಿಸಿದ ಕಾದಂಬರಿ ಇದು. ದಲಿತ ಲೋಕವನ್ನು ಪರಿಚಯಿಸುವ ಈ ಹಿಂದಿನ ಪರಿಕರಗಳನ್ನು ಒಡೆದು ಹೊಸದೇ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ.
ಬರಹದ ವಿಶಿಷ್ಟ ಶೈಲಿ ಹಾಗೂ ಓದಿನ ವಿಷಯವನ್ನು ಒಟ್ಟಾಗಿ ಮನಸೊಳಗೆ ಇಳಿಸಿಕೊಳ್ಳಬಹುದು. ಕಾದಂಬರಿಯಂತೆ ಈ ಸಾಲು ಸಹ ಚಿಂತನೆ ಹುಟ್ಟುವಂತೆ ಮತ್ತು ಓದು ವಿಸ್ತಾರಗೊಳಿಸಿಕೊಳ್ಳಲು ಪ್ರೇರೇಪಿಸುವಷ್ಟು ಸಶಕ್ತವಾಗಿದೆ.
ಕವಿ, ಲೇಖಕ ವಿ.ಎಂ. ಮಂಜುನಾಥ್ ಬೆಂಗಳೂರಿನ ವೆಂಕಟಾಲ ಗ್ರಾಮದಲ್ಲಿ ಸೆಪ್ಟಂಬರ್ 13, 1976ರಲ್ಲಿ ಜನಿಸಿದರು. ತಂದೆ-ಮುನಿಮಾರಪ್ಪ ಮತ್ತು ತಾಯಿ- ನಾರಾಯಣಮ್ಮ. ವೆಂಕಟಾಲ ಮತ್ತು ಯಲಹಂಕದಲ್ಲಿ ವಿದ್ಯಾಭ್ಯಾಸ, ಹೈಸ್ಕೂಲ್ ಓದುತ್ತಿರುವಾಗಲೇ ಲಂಕೇಶರ ಪ್ರಭಾವದಿಂದ ಸಾಹಿತ್ಯ ರಚನೆ ಆರಂಭಿಸಿದರು. ಇವರ ಮೊದಲ ಪದ್ಯ ಲಂಕೇಶ್ ನೆನಪಿನ ‘ಇಂತಿ ನಮಸ್ಕಾರಗಳು’ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಅಭಿನಯ ತರಂಗ ಮತ್ತು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ಡಿಪ್ಲೋಮಾ, 2003ರಲ್ಲಿ ಫಾದರ್ 55 ಮತ್ತು ನೀನಾಸಂ ಡೈರಿಯ ಕವಿತೆಗಳು, 2004ರಲ್ಲಿ ಲೆವೆಲ್ ಕ್ರಾಸಿಂಗ್ ಕವನ ಸಂಕಲನ, 2008ರಲ್ಲಿ ಬ್ರಾಂಡಿ ಕಥಾಸಂಕಲನ, 2008ರಲ್ಲಿ ಕ್ರಿಮಿ ನಾಟಕ, 2012ರಲ್ಲಿ ...
READ MOREಸಿಕೆ ಜೇಡನ ಆತ್ಮಚರಿತ್ರೆ - ವಿ.ಎಂ.ಮಂಜುನಾಥ್