ಲೇಖಕಿ ಸಿ ಎನ್ ಮುಕ್ತಾ ಅವರ ಕಾದಂಬರಿ ‘ಚಿತ್ತಾರ ದರ್ಪಣ’. ವಾಸ್ತವದ ನೆಲೆಗಟ್ಟಿನಲ್ಲಿ ಪಾತ್ರಗಳನ್ನು ಚಿತ್ರಿಸುತ್ತಾ , ನಿಜ ಜೀವನಕ್ಕೆ ಹತ್ತಿರವಾದ ಕಥೆಗಳನ್ನು ಕಟ್ಟಿಕೊಡುತ್ತಾ , ಓದುಗರಿಗೆ ಹತ್ತಿರವಾಗುವ ಮುಕ್ತಾ ಅವರು ಇಲ್ಲೂ ಸಹಾ ಓದುಗರ ಮನ ಗೆದ್ದಿದ್ದಾರೆ . ಹೆಣ್ಣಿನ ಸ್ವಾಭಿಮಾನವನ್ನು ಎತ್ತಿ ಹಿಡಿದಿರುವ ಲೇಖಕಿಯ ನಿಲುವು ಇಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತದೆ . ಇಲ್ಲಿ ನಾಯಕಿ ಅಪೂರ್ವಾ ಸುಂದರಿ , ವಿದ್ಯಾವಂತೆ , ಒಳ್ಳೆ ಉದ್ಯೋಗದಲ್ಲೂ ಇದ್ದಾಳೆ . ಅವಳಿಗೆ ಅನುರೂಪನಾದ ಸುಂದರ ಹುಡುಗ , ಅಂತಸ್ತಿನಲ್ಲಿ ಅವಳಿಗಿಂತ ಮೇಲಿರುವ ಅವಳ ಕಂಪನಿಯ ಮಾಲಿಕ ಅವಳನ್ನು ಮೆಚ್ಚಿ ಒಲಿದು ಬಂದಾಗ ಅಪೂರ್ವಾಳ ನಿಲುವು ಏನಿತ್ತು ? ಲೇಖಕಿ ಇದನ್ನು ಬಹಳ ಸುಂದರವಾಗಿ ಚಿತ್ರಿಸಿದ್ದಾರೆ . ನಾಯಕಿಯ ಪಾತ್ರದ ಗಾಂಭೀರ್ಯ , ಸಂಯಮ ಇಲ್ಲಿ ಓದುಗರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಎಲ್ಲೂ ಅಪೂರ್ವಾ ತನ್ನತನವನ್ನು ಬಿಟ್ಟುಕೊಡದಿರುವುದು ಇಷ್ಟವಾಗುತ್ತದೆ .
ಮುಕ್ತಾ ಸಿ. ಎನ್. ಅವರು ಮೂಲತಃ ಚಿತ್ರದುರ್ಗದವರು. 1951 ಏಪ್ರಿಲ್ 30ರಂದು ಜನನ. ಸಹಾಯಕ ಶಿಕ್ಷಕಿಯಾಗಿ ನಂಜನಗೂಡಿನ ಬಾಲಕಿಯರ ವಸತಿ ಸಹಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಸಿ.ಬಿ ನರಸಿಂಹಮೂರ್ತಿ, ತಾಯಿ – ಸಿ.ಎನ್ ಕಮಲಮ್ಮ. ಚಿಕ್ಕಂದಿನಲ್ಲೇ ಸಾಹಿತ್ಯದ ಒಡನಾಟದಲ್ಲಿ ಬೆಳೆದ ಮುಕ್ತಾ ಅವರು ಸಾಹಿತ್ಯ ಕೃಷಿಯಲ್ಲಿ ತಮ್ಮದೇ ಬರಹಗಳ ಮೂಲಕ ಮನೆಮಾತಾಗಿದ್ದಾರೆ. 1953 ರಲ್ಲಿ ಆಶ್ರಯ, 1975 ರಲ್ಲಿ ಮರೀಚಿಕೆ, 1982 ರಲ್ಲಿ ವಿಮುಕ್ತೆ, 1983 ರಲ್ಲಿ ದಡ ಸೇರಿದ ನೌಕೆ, ಸುವರ್ಣ ಸಂಕೋಲೆ, ನನಸಾಗದ ಕನಸು, ಸುಖದ ಸೋಪಾನಗಳು, ಒಲವಿನ ಉಯ್ಯಾಲೆ, ಕಳೆದು ಹೋದವರು ಮುಂತಾದವುಗಳು ಇವರ ...
READ MORE