ನಾಲ್ಕು ಕುಟುಂಬಗಳ ವಿಭಿನ್ನವಾದ ಕತೆಗಳು ಒಂದಕ್ಕೊಂದು ಬೆಸೆದುಗೊಂಡು ಈ ಕಾದಂಬರಿಯಲ್ಲಿ ಚಿತ್ರಿತವಾಗಿವೆ.ತಂದೆ ತಾಯಿಯರನ್ನು ಬಿಟ್ಟು ಬಂದು ಪ್ರೇಮಿಸಿ ಮದುವೆಯಾದ ಕರುಣಾಕರ್ ಮತ್ತು ಮಾಲಿನಿ, ಎಷ್ಟೋ ಸಮಯಗಳ ತನಕ ಹಿರಿಯರನ್ನು ಭೇಟಿಯಾಗಿರುವುದೇ ಇಲ್ಲ. ಮಗ ವಯಸ್ಸಿಗೆ ಬರುವಾಗ ತನ್ನ ವರ್ತನೆಯಿಂದ ಪಶ್ಚಾತ್ತಾಪ ಪಟ್ಟು ಕರುಣಾಕರ್ ಹೋಗಿ ತಂದೆ ತಾಯಿಯರನ್ನು ಭೇಟಿಯಾಗಿ ಬರುತ್ತಾರೆ. ತಂದೆ ದೇಶಾಂತರ ಹೋದ ಮೇಲೆ ಒಬ್ಬಂಟಿಯಾದ ತಾಯಿ, ಮನೆ ಮತ್ತು ಅಂಗಡಿಯನ್ನು ರಸ್ತೆ ಅಗಲೀಕರಣಕ್ಕೆಂದು ಸರಕಾರದವರು ವಶ ಪಡಿಸಿಕೊಂಡು ನಿರಾಶ್ರಿತರಾದಾಗ ಅವರನ್ನು ಮನೆಗೆ ಕರೆ ತರುತ್ತಾರೆ. ಸೊಸೆ ಮಾಲಿನಿ ಅತ್ತೆ ಕೊಟ್ಟ ಒಡವೆಗಳನ್ನು ಮುರಿಸಿ ಹೊಸ ಮಾದರಿ ಒಡವೆ ಮಾಡಿಸುತ್ತಾಳೆ, ದೊಡ್ಡ ಮನೆ ಖರೀದಿಸಲು ಫ್ಲಾಟ್ ಮಾರಿದ ಹಣ ಸಾಕಾಗುವುದಿಲ್ಲವೆಂದು ನಯವಾದ ಮಾತುಗಳಿಂದ ಒಪ್ಪಿಸಿ, ಸರಕಾರದಿಂದ ಬಂದ ಪರಿಹಾರದ ಹಣವನ್ನೂ ಪಡೆಯುತ್ತಾಳೆ. ಹೊಸ ಮನೆಗೆ ಹೋದ ಮೇಲೆ ಬರಿ ಕೈಯಾದ ಅತ್ತೆಯ ಪ್ರತಿ ಸೊಸೆಯ ನಡವಳಿಕೆ ಹೇಗಿರುತ್ತದೆ? ಮಗ ಕರುಣಾಕರ್ ಮತ್ತು ಮೊಮ್ಮಗ ಪ್ರತೀಕ್ ನಡವಳಿಕೆ ಹೇಗಿರುತ್ತದೆ? ಮಗ ಸಂದೀಪ ರಾಖಿಯನ್ನು ಪ್ರೇಮಿಸುತ್ತಾನೆ, ಪ್ರೇಮ ಬಲಿತ ಮೇಲೆ ಅವಳು ಪ್ರಸಿದ್ಧ ರಾಯ್ ಕುಟುಂಬದವಳು ಎಂಬ ವಿಷಯ ತಿಳಿಯುತ್ತದೆ. ಸಂದೀಪ್‌ನನ್ನು ಮನೆ ಅಳಿಯನಾಗಿ ಮಾಡಿಕೊಂಡು ತಂದೆ ಮತ್ತು ತಂಗಿಯಿಂದ ಅವನನ್ನು ದೂರ ಮಾಡುವುದು ಅವರ ಉದ್ದೇಶ. ಆಸ್ಪತ್ರೆಯಿಂದ ಪುಣ್ಯ ಸಂದೀಪ್ ಎನ್ನುವವರ ಹೆರಿಗೆ ಆಗಿದೆ, ಅವರು ನಿಮ್ಮನ್ನು ನೋಡ ಬಯಸುತ್ತಾರೆ ಎಂಬ ಕರೆ ಬರುತ್ತದೆ ಚಿರಂತನದತ್ತರಿಗೆ. ಅವರು ಆಸ್ಪತ್ರೆಗೆ ಹೋದರೆ,ಅವರು ಆಗಲೇ ಡಿಸ್ಚಾರ್ಜ್ ಆಗಿ ಹೋಗಿದ್ದಾರೆ ಎಂಬ ಸುದ್ದಿ ತಿಳಿಯುತ್ತದೆ.ಈ ವಿಷಯವನ್ನೇ ದೊಡ್ಡದು ಮಾಡಿ,ಆಗಾಗ ಈ ಬಗ್ಗೆ ಪ್ರಶ್ನಿಸಿ,ಅದರ ಬಗ್ಗೆ ಗೂಢಚರ್ಯೆ ಮಾಡಿದ ರಾಯ್ ಫ್ಯಾಮಿಲಿ ಬಗ್ಗೆ ಸಂದೀಪ್‌ಗೆ ಸಿಟ್ಟು, ಬೇಸರ ಉಂಟಾಗುತ್ತದೆ.ರಾಖಿ ಸಂದೀಪನಿಗಿಂತ ಮೂರು ವರ್ಷ ದೊಡ್ಡವಳು ಎಂಬ ವಿಷಯವೂ ಬಯಲಾಗುತ್ತದೆ.ಮದುವೆಗೆ ಒತ್ತಡ ತರುವ ಅವರು ಪುಣ್ಯ ಸಂದೀಪ್‌ಗೂ ತಮಗೂ ಸಂಬಂಧವಿಲ್ಲವೆಂದು,ಚಿರಂತನದತ್ತರು ಪತ್ರಕ್ಕೆ ಸಹಿ ಹಾಕಬೇಕೆಂದು ಬಲವಂತ ಮಾಡುತ್ತಾರೆ. ಅವರು ಹೇಳಿದ ಪತ್ರಕ್ಕೆ ಚಿರಂತನದತ್ತರು ಸಹಿ ಹಾಕಿದರೆ? ಸಂದೀಪ್ ಮತ್ತು ರಾಖಿ ಮದುವೆ ನಡೆಯಿತೇ? ಪುಣ್ಯ ಸಂದೀಪ್ ಎಂಬ ಪಾತ್ರ ಅಸ್ಥಿತ್ವದಲ್ಲಿರುವುದೇ? ಉತ್ತರ ಈ ಕಾದಂಬರಿಯಲ್ಲಿದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE