ಚಿದಗ್ನಿ ಡಾ.ಬಿ.ಪ್ರಭಾಕರ ಶಿಶಿಲ ಅವರ ಕಾದಂಬರಿಯಾಗಿದೆ. ಅದು ಕನ್ನಡದ ಅತ್ಯಂತ ಮಹತ್ವದ ಕಾದಂಬರಿ,ದೇವರೆಂದರೇನೆಂಬ ಪ್ರಶ್ನೆಗೆ ಲಲಿತಾ ಸಹಸ್ರಾನಾಮದಲ್ಲಿ ಉತ್ತರ ಹುಡುಕುವ ವಿಶಿಷ್ಟ ವಿದ್ಯಾಮಾನದ ಸುತ್ತ ಕಾದಂಬರಿ ಹಣೆಯಲಾಗಿದೆ. ಒಂದೆಡೆ ಲಲಿತಾ ಸಹಸ್ರಾನಾಮದ ಥಿಯರಿ. ಇನ್ನೊಂದೆಡೆ ಚೆಲುವೆ ಹೆಣ್ಣೊಬ್ಬಳ ಮೇಲಿನ ಕಥೆಗಳು ಬಹಳ ರೋಚಕವಾಗಿದೆ. ಲಲಿತಾಂಬಿಕೆಯನ್ನು ತನ್ನ ಹೆಂಡತಿಯಲ್ಲಿ ಕಂಡು ಮಾನಸಿಕ ಷಂಡತ್ವ ಅನುಭವಿಸುವ, ಅಂದರಿಂದಾಗಿ ಸಂಸಾರ ವಿಘಟನೆಗೊಳ್ಳುವ ಕರುಣಾಜನಕ ವಸ್ತುವನ್ನು ಕಾದಂಬರಿ ಹೊಂದಿದೆ. ಇದರ ಅಂತ್ಯ ಯಾರೂ ಊಹಿಸದ ರೀತಿಯಲ್ಲಾಗಿ ಮನಸಿಗೆ ಅಹ್ಲಾದ ಉಂಟಾಗುತ್ತದೆ. ಇದು ಅನ್ಯ ಭಾಷೆಗಲಿಗೆ ಅನುವಾದಬೇಕಾದ ಅಪೂರ್ವ ಕೃತಿ ಎಂದು ಪ್ರೊ ಎಂ ಕೃಷ್ಣೇಗೌಡ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ಲೇಖಕ ಡಾ. ಪ್ರಭಾಕರ ಶಿಶಿಲ ಅವರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯದತ್ತ ಹೆಚ್ಚಿನ ಆಸಕ್ತಿ ಹೊಂದಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಅರ್ಥಶಾಸ್ತ್ರದ ಪಠ್ಯಪುಸ್ತಕಗಳನ್ನು ರಚಿಸಿದ್ದಾರೆ. ಕೃತಿಗಳು: ಮತ್ಸ್ಯಗಂಧಿ, ಗಗ್ಗರ, ಬಾರಣೆ, ಗುಜರಿ ಅದ್ದಿಲಿಚ್ಚನ ಜಿಹಾದಿಯ, ಕೊಡಗಿನ ಐತಿಹ್ಯ ಕಥೆಗಳು, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕತೆಗಳು, ಜಲಲ ಜಲಧಾರೆ, ದೊಡ್ಡ ವೀರ ರಾಜೇಂದ್ರ, ಕೊಡಗಿನ ಕತೆಗಳು. ಶಿಶಿಲರನ್ನೇ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ . ಸುವರ್ಣ ಅಭಿನಂದನಾ ಸ್ಮರಣಿಕೆ, ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ, ಶಿಶಿಲರ ಜೀವನ ಮತ್ತು ಸಾಧನೆಗಳು, ಪ್ರಭಾಕರ ಶಿಶಿಲರ ಸಾಹಿತ್ಯ ಕುರಿತು ಡಾ. ಮೋಹನ ಕುಮಾರ ...
READ MORE