‘ಚಂದ್ರನ ಚೂರು’ ಆಲೂರು ದೊಡ್ಡನಿಂಗಪ್ಪ ಅವರ ಕಾದಂಬರಿ. ಕೃತಿಗೆ ಪತ್ರಕರ್ತ, ಲೇಖಕ ಚ.ಹ. ರಘುನಾಥ್ ಅವರ ಮುನ್ನುಡಿ ಬೆನ್ನುಡಿಗಳಿವೆ. ಕೃತಿಯ ಕುರಿತು ಬರೆಯುತ್ತಾ ಆಲೂರು ದೊಡ್ಡನಿಂಗಪ್ಪನವರ 'ಚಂದ್ರನ ಚೂರು' ಕಾದಂಬರಿಯ ಶಕ್ತಿ ಇರುವುದೇ ವರ್ತಮಾನದ ಕೇಡುಗಳನ್ನು ಎದುರು ಹಾಕಿಕೊಂಡಿರುವುದರಲ್ಲಿ. ಈ ದೇಶವನ್ನು ಶಾಪದಂತೆ ಕಾಡುತ್ತಿರುವ ಜಾತೀಯತೆಯ ಸ್ವರೂಪವನ್ನು ಚಿತ್ರಿಸುತ್ತಲೇ, ಅದಕ್ಕೆ ಪ್ರತಿಯಾಗಿ ಮಾನವೀಯ ಸ್ಪಂದನಗಳನ್ನು ಕಟ್ಟಿಕೊಡುವ ಹಂಬಲ ಕಾದಂಬರಿಯ ಜೀವದ್ರವ್ಯವಾಗಿದೆ ಎಂದಿದ್ದಾರೆ ರಘುನಾಥ್.
ಹಾಗೆ ಅತ್ಯಂತ ಕಡಿಮೆ ಪಾತ್ರಗಳನ್ನು ಬಳಸಿಕೊಂಡು ಕಥನವನ್ನು ನಿರೂಪಿಸಿರುವುದು ಕಾದಂಬರಿಯ ಗಮನಾರ್ಹ ಸಂಗತಿಗಳಲ್ಲೊಂದು. ಮಕ್ಕಳ ಕಣ್ಣಿನಿಂದ ಸಮಾಜವನ್ನು ನೋಡುವ, ಚಿತ್ರಿಸುವ ತಂತ್ರವನ್ನು ದೊಡ್ಡನಿಂಗಪ್ಪ ಈ ಕಾದಂಬರಿಯಲ್ಲಿ ಬಳಸಿಕೊಂಡಿದ್ದಾರೆ. ಅಪಾರ ಜೀವನೋತ್ಸಾಹ ಮತ್ತು ಮುಗ್ಧತೆಯನ್ನು ಒಳಗೊಂಡ ತ್ಯಾಗನ ಕಣ್ಣುಗಳ ಮೂಲಕ ಊರಿನ ಜಾತೀಯತೆಯ ಸ್ವರೂಪವನ್ನು ಕಾದಂಬರಿ ಕಟ್ಟಿಕೊಡುತ್ತದೆ ಎಂದಿದ್ದಾರೆ.
ಲೇಖಕ ಆಲೂರು ದೊಡ್ಡನಿಂಗಪ್ಪ ಅವರು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಆಲೂರಿನವರು. ಸದ್ಯಕ್ಕೆ ಮೈಸೂರಿನ ರಂಗಾಯಣದಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸದಾ ಕ್ರಿಯಾಶೀಲರು. 'ಪಲ್ಲಟ' ಕನ್ನಡ ಚಲನಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕೃತಿಗಳು: 'ನೇಕಾರ', 'ಮುಟ್ಟು' ಮತ್ತು 'ಎದೆಯ ಹೊಲದಲ್ಲಿ ಸೂರ್ಯಕಾಂತಿ,( ಕವನ ಸಂಕಲನಗಳು). ...
READ MORE