‘ಚಕ್ರವ್ಯೂಹ’ ಯಶ್ವಿ ನಿಹಾರಿಕ ಅವರ ಸಾಮಾಜಿಕ ಕಾದಂಬರಿಯಾಗಿದೆ. ಯಶ್ವಿ ನಿಹಾರಿಕ ಅವರ ಮುನ್ನುಡಿ ಬರಹವಿದೆ: ಇದೊಂದು ಬಹುರೂಪೀ ಪಾತ್ರಧಾರಿಗಳು, ಮುಖವಾಡಗಳನ್ನು ಧರಿಸಿ ಕಣ್ಣುಮುಚ್ಚಾಲೆಯಾಡುವ ಸಾಮಾಜಿಕ ಕಾದಂಬರಿ. ಮಹಿಳಾ ದೌರ್ಜನ್ಯ, ಶೋಷಿತರ ರಕ್ಷಣೆ, ಮೈನಾರಿಟಿಗಳ ಮೇಲೆ ಅತ್ಯಾಚಾರ, ಸಂಸಾರದಲ್ಲಿ ಒಡಕುಂಟು ಮಾಡುವುದು, ಧನಾಪಹರಣ, ವರದಕ್ಷಿಣೆ ಮತ್ತು ಹಿಂಸಾಚಾರ ಇಷ್ಟೆಲ್ಲ ನಡೆಯುವುದೂ, ನಡೆಸುವುದೂ, ನಾವು ನಂಬಿದ ರಕ್ಷಿತರುಗಳಿಂದಲೇ ಆಗುತ್ತಿರುವುದೊಂದು ವಿಷಾದಕರ ಸಂಗತಿ. ಇದರ ದುರ್ಬಳಕೆಯಾಗುತ್ತಿರುವುದು ಮತ್ತೂ ವಿಷಾದಕರ! ಕಾನೂನು ತಜ್ಞರೂ, ರಕ್ಷಣೆ ನೀಡುವವರೂ, ಇಂತಹ ಅಪರಾಧಗಳನ್ನು ಬೆಳಕಿಗೆ ಬಾರದಂತೆ ರಾಜಕೀಯ ಕುತಂತ್ರಗಳಲ್ಲಿದ್ದು ಮುಗ್ಧರು ಇದರ ಬಲೆಯಲ್ಲಿ ಸಿಲುಕಿ, ನಶಿಸಿ, ನಲುಗಿ, ಸುಟ್ಟು ಬೂದಿಯಾಗುವುದನ್ನು ಸಮಾಜ ನೋಡುತ್ತ ಕುಳಿತಿರಬೇಕೆ ? ಅಥವಾ ಸುಧಾರಿಸುವ ಪ್ರೇರಣೆ ನೀಡಬೇಕೆ? ನೀವೇ ಹೇಳಿ!