`ಬೌದಿ’ ಪಾರ್ವತಿ ಜಿ. ಐತಾಳ್ ಅವರ ಅನುವಾದಿತ ಕಾದಂಬರಿಯಾಗಿದೆ. ಕಣಕ್ಕೂರ್ ಆರ್.ಸುರೇಶ ಕುಮಾರ್ ಅವರ ಮಲಯಾಳಂ ಮೂಲ ಕೃತಿ ಇದಾಗಿದೆ. ಈ ಕೃತಿಯ ಕುರಿತು ಅನುವಾದಕಿ ಪಾರ್ವತಿ ಜಿ. ಐತಾಳ್ ಅವರು ಹೀಗೆ ಹೇಳುತ್ತಾರೆ; 'ಬೌದಿ' ಕಾದಂಬರಿಯು ಮುಖ್ಯವಾಗಿ ಓದುಗರ ಗಮನ ಸೆಳೆಯುವುದು ಅದು ರವೀಂದ್ರನಾಥ ಟಾಗೋರ್ ಅವರ ಜೀವನದಲ್ಲಿ ನಡೆಯಿತೆಂದು ಹೇಳಲಾಗುವ ಒಂದು ಪ್ರೇಮ ಕಥೆಗೆ ಸಂಬಂದಿಸಿದ್ದು ಎನ್ನುವ ಕಾರಣಕ್ಕಾಗಿ. ಆದರೆ ಇದು ಹೆಣ್ಣು-ಗಂಡಿನ ನಡುವಣ ಸಂಬಂಧದಲ್ಲಿ ಎಲ್ಲರೂ ನಿರೀಕ್ಷಿಸುವಂತಹ ಒಂದು ಸಾಮಾನ್ಯ ಪ್ರಣಯ ಕಥೆಯಲ್ಲ.ಅತ್ಯಂತ ಸೂಕ್ಷ್ಮ ಮನಸ್ಸಿನ ಹೆಣ್ಣಾದ ಕಾದಂಬರಿ (ರವೀಂದ್ರನಾಥ ಟ್ಯಾಗೋರ್ ಅವರ ಅಣ್ಣನ ಹೆಂಡತಿ) ಮತ್ತು ಕವಿಹೃದಯದ ಮೃದು ಸ್ವಭಾವದ ರವೀಂದ್ರನಾಥರ ನಡುವಣ ಆತ್ಮಬಂಧವೇ ಈ ಕಾದಂಬರಿಯ ಜೀವಾಳ. ರವೀಂದ್ರನಾಥರ ಮದುವೆಯಾಗಿ ನಾಲ್ಕು ತಿಂಗಳಲ್ಲಿ ಅಗಲಿಕೆಯ ನೋವನ್ನು ಸಹಿಸಿಕೊಳ್ಳಲಾರದೆ ಕಾದಂಬರಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೃದಯ ವಿದ್ರಾವಕವಾದ ಒಂದು ದುರಂತ. ರವೀಂದ್ರನಾಥರ ಅಣ್ಣ ದೇವೇಂದ್ರನಾಥ್ ಅವರು ಜಿಲ್ಲಾಧಿಕಾರಿಯಾಗಿದ್ದ ಕಾರವಾರದ ಕಡಲತೀರದ ಸುತ್ತಮುತ್ತ ಸ್ವಾತಂತ್ಯ ಪೂರ್ವದಲ್ಲಿ ನಡೆಯುವ ಘಟನೆಗಳ ಚಿತ್ರಣವು ಹತ್ತಾರು ಹೊಸ ಕಾಲ್ಪನಿಕ ಪಾತ್ರಗಳ ಮೂಲಕ ಕಾದಂಬರಿಗೆ ಒಂದು ಸುಂದರ ಚೌಕಟ್ಟನ್ನು ಒದಗಿಸಿದೆ. ಹೃದ್ಯ ಅನುವಾದವು ಕೃತಿಯು ಕನ್ನಡದ್ದೇ ಎಂಬಷ್ಟು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ.
ಪಾರ್ವತಿ ಜಿ.ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ ಜುಲೈ 23, 1957ರಂದು ಜನಿಸಿದರು. 1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ 1988ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾರ್ವತಿ ಅವರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ...
READ MORE