ಕನ್ನಡ ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿದ ಲೇಖಕ, ಪತ್ರಕರ್ತ ಪಿ.ಲಂಕೇಶ್ ಅವರ ಕಾದಂಬರಿ ‘ಬಿರುಕು’. ತಲೆಮಾರುಗಳ ನಡುವಿನ ಬಿರುಕುಗಳನ್ನು ಬಿಂಬಿಸುವ ಈ ಕೃತಿಯನ್ನು ರಂಗರೂಪಕ್ಕಿಳಿಸಿದ್ದ ಲಂಕೇಶ್ ಮತ್ತದೇ ಕೃತಿಯನ್ನು ಪಲ್ಲವಿ ಚಿತ್ರವನ್ನಾಗಿಸಿದ್ದರು. ಈ ಕಾದಂಬರಿಯ ಕೇಂದ್ರ ಪಾತ್ರ ಬಸವರಾಜ. ಅವನೊಬ್ಬ ಹಳ್ಳಿ ಹುಡುಗ. ಇಂಗ್ಲಿಷ್ ಸಾಹಿತ್ಯದಲ್ಲಿ ಪಿ.ಎಚ್.ಡಿ. ಮಾಡಲು ಬೆಂಗಳೂರಿಗೆ ಬಂದಿದ್ದಾನೆ. ಹೊಸ ಪರಿಸರದಲ್ಲಿ ಅವನು ಒಂದು ರೀತಿಯ ಸಾಂಸ್ಕೃತಿಕ ಆಘಾತಕ್ಕೆ ಒಳಗಾಗಿದ್ದಾನೆ. ಈ ಆಘಾತವನ್ನು ಅವನು ನಿಭಾಯಿಸುವ ಕ್ರಮ, ಅದರ ಪೇಚಾಟಗಳು, ಅದಕ್ಕಾಗಿ ಅವನು ಹೊಂಚಿಕೊಳ್ಳುವ ಉಪಾಯಗಳು, ಅದರಿಂದ ಅವನು ಹೇಳಬೇಕಾದ ಸುಳ್ಳುಗಳು, ಅವುಗಳಿಂದಾಗಿ ಹಾಸ್ಯಾಸ್ಪದನಾಗುವ ಸನ್ನಿವೇಶಗಳು ಕಾದಂಬರಿಯ ಬಂಧವನ್ನು ಕಟ್ಟಿವೆ.
ಅಷ್ಟೇ ಅಲ್ಲ, ತನ್ನ ಮುಗ್ಧತೆ, ಅಸಹಾಯಕತೆ ಮತ್ತು ಇಕ್ಕಟ್ಟಿನ ಸ್ಥಿತಿಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳಬಯಸುವವರಿಂದ ಅವನು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾಗಿದೆ. ಈ ಹೊಸ ಪರಿಸರದಲ್ಲಿ ತನ್ನ ಅಸ್ತಿತ್ವವನ್ನು ಶೋಧಿಸಿಕೊಳ್ಳಬೇಕಾಗಿದೆ. ಆ ದಾರಿಯಲ್ಲಿ ಸಾಗುವ ಕಾದಂಬರಿ ಓದಿಸಿಕೊಳ್ಳುತ್ತದೆ.
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...
READ MORE