ಬಿದಿಗೆ ಚಂದ್ರಮ ಡೊಂಕು

Author : ಎಂ.ಕೆ. ಇಂದಿರಾ

Pages 174




Year of Publication: 1976
Published by: ಪ್ರಕಾಶ ಸಾಹಿತ್ಯ
Address: # 2, ತಲಕಾಡು, ಸುಬ್ಬರಾವ್ ಗಲ್ಲಿ, ಅರಳೀಪೇಟೆ, ಬೆಂಗಳೂರು-560053

Synopsys

ಖ್ಯಾತ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಅವರ ಕಾದಂಬರಿ-ಬಿದಿಗೆ ಚಂದ್ರಮ ಡೊಂಕು. ಕಾದಂಬರಿಯ ನಾಯಕಿ ಬೃಂದಾಳ ಪಾಲಿನ ಚಂದ್ರಮ ವಸಂತ. ಅವನು ಬಿದಿಗೆಯ ಚಂದ್ರಮನಾದರೂ ಚಂದ್ರಮನಂತೆಯೇ ಕಡುಪಾಪಿಯ ಮೇಲೂ ಹಾಗೂ ಪುಣ್ಯಶಾಲಿಯ ಮೇಲೂ ನಿಷ್ಪಕ್ಷಪಾತವಾಗಿ ಔದಾರ್ಯದ ಬೆಳದಿಂಗಳ ತಂಪನ್ನೇ ಹಾಯಿಸುತ್ತಾನೆ. ಪ್ರಕೃತಿಯಂತೆ ಒಂದೇ ಬಗೆಯ ಹೃದಯ ವೈಶಾಲ್ಯತೆ ಇದೆ ಅವನಿಗೆ. ಅಂತೆಯೇ ಅವನು ಗೋದಾವರಿಯನ್ನೂ ಕ್ಷಮಿಸುತ್ತಾನೆ. ಇದೇ ಕಾದಂಬರಿಯ ವಸ್ತು. ಈ ಕಾದಂಬರಿಯು 1969ರಲ್ಲಿ ಮೊದಲ ಮುದ್ರಣ ಕಂಡಿತ್ತು.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books