1857ರ ಭಾರತದ ಮೊದಲ ಸ್ವಾತಂತ್ಯ್ರ ಸಂಗ್ರಾಮ ಕುರಿತು ವಿಶ್ಲೇಷಿಸಿರುವ ಕಾದಂಬರಿ ಇದು. ಬ್ರಿಟಿಷ್ ವಸಹಾತುಶಾಹಿ ಆಡಳಿತದ ವಿರುದ್ಧ ಭಾರತೀಯರು ದಂಗೆ ಎದ್ದರು. ಈ ದಂಗೆಗೆ ಕಾರಣ, ಏನೆಲ್ಲ ಘಟನೆಗಳು ಸಂಭವಿಸಿದವು ಎಂಬುದನ್ನು ಕೂಲಂಕುಶವಾಗಿ ಚರ್ಚಿಸಲಾಗಿದೆ.
ಪ್ರಸ್ತುತ ಕೃತಿಯು ದಂಗೆಯ ಮುಂಚಿನ ಹಿಂದೂಸ್ಥಾನ, ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು, ದಂಗೆಯ ಜಾಡು, ಇನ್ನೆರಡು ದಂಗೆಗಳೊಡನೆ ಹೋಲಿಕೆ, ಕೆಲವು ಸಮಕಾಲೀನ ಪ್ರತಿಕ್ರಿಯೆಗಳು, ಜನಪದದಲ್ಲಿ ಮಿಂಚಿದ 1857ರ ಭಾರತ ಸ್ವಾತಂತ್ರ ಸಂಗ್ರಾಮದ ಒಂದು ಇಣುಕುನೋಟ, 1857ರ ಪ್ರತಿರೋಧ-ಒಂದು ಪರಾಮರ್ಶೆ ಮುಂತಾದ ವಿಷಯಗಳ ಕುರಿತು ಲೇಖಕರು ವಿಶ್ಲೇಷಿಸಿದ್ದಾರೆ.
ಬರಹಗಾರರಾದ ಕೆ.ಎಸ್. ಪಾರ್ಥಸಾರಥಿಯವರು ನಿವೃತ್ತ ಟೆಲಿಕಾಂ ಇಂಜಿನಿಯರ್. ಸಮಕಾಲೀನ ಅರ್ಥವ್ಯವಸ್ಥೆಗೆ ಸಂಬಂಧಿಸಿದ ವಿಶ್ಲೇಷಣೆಗಳನ್ನು ಇವರು ಹೊಸತು ಪತ್ರಿಕೆಗೆ ಬರೆದಿದ್ದಾರೆ. ಭಾರತದ ಪ್ರಥಮ ಸ್ವಾತಂತ್ಯ್ರ ಸಂಗ್ರಾಮ: ಒಂದು ಚಾರಿತ್ರಿಕ ಹಿನ್ನೋಟ ಕೃತಿಯನ್ನು ಇವರು ರಚಿಸಿದ್ದಾರೆ. ಪ್ರೊ. ಕೆ.ಎನ್. ಪಣಿಕ್ಕರ್ ಅವರು ಬರೆದ ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಿ.ವಿ. ಕಕ್ಕಿಲ್ಲಾಯರ ಸಂಭಾವನಾ ಗ್ರಂಥ ‘ನಿರಂತರ’ ಇವರು ಸಂಪಾದಿಸಿದ ಕೃತಿಯಾಗಿದೆ. ...
READ MORE