ಮನೋಜ್ ಪಿ ಎಂ (ದೇವೀಪುತ್ರನ್) ಅವರ ಕಾದಂಬರಿ ಭಾಮೆ. ಇಬ್ಬರು ಹದಿಮೂರು ವರ್ಷಗಳ ಹುಡುಗಿಯರ ಜೊತೆಗಿನ ಕಥಾನಾಯಕನ ಕಥೆ ತೆರೆದುಕೊಳ್ಳುತ್ತದೆ. ಇವರ ನಡುವೆ ನಡೆಯುವ ಸಂಭಾಷಣೆ ಕಥಾ ವಸ್ತುವಿನ ಪೀಠಿಕೆ ಕೂಡ ಎಂದರೆ ತಪ್ಪಲ್ಲ. ಒಂದು ಬಗೆಯಲ್ಲಿ ನಾಯಕನನ್ನು ಯಾವುದೋ ಕಾರ್ಯಕ್ಕೆ ಪ್ರಚೋದಿಸುವಿಕೆ. ಭಾಮೆಯನ್ನು ಕರೆತರಲು ಈ ಪ್ರಚೋದನೆ ಭಾಮೆ, ಅಕಾ , ಮಾಧವಿ ಹೆಸರಿನ ಪರಿಚಯವಷ್ಟೇ. ಅವಳನ್ನು ಕರೆತರಲು ಹೊರಟಾಗ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಕಾದಂಬರಿ ಹೊಸ ಬಗೆಯ ತಂತ್ರ, ಹೊಸ ಲೇಖಕರ ಲೋಕ, ಹೊಸ ಬಗೆಯ ಯುವ ಜನತೆ, ಹೊಸ ಭಾಷೆ,ವಿಭಿನ್ನ ನಡೆವಳಿಕೆಯ ಯುವತಿ ಯರು ಎಲ್ಲರ ಪರಿಚಯ ಮಾಡಿ ಕೊಡುತ್ತಾ ಬಹುಶಃ ಲೇಖಕರು ಇಂದಿನ ಸಮಾಜಕ್ಕಿಂತ ಒಂದೆರಡು ದಶಕಗಳ ಮುಂದಿನ ಸಮಾಜದ ವಿಚಾರ ಧಾರೆ ಹೊಂದಿರಬಹುದು ಎಂಬ ನಿಲುವು ಓದುಗ ತಳೆಯಲು ಸಾಧ್ಯ
ದೇವೀಪುತ್ರನ್ ಕಾವ್ಯನಾಮದಿಂದ ಬರೆಯುವ ಮನೋಜ್ ಪಿ. ಎಂ. ಅವರು ಅರ್ಥಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ಬಿ.ಎಡ್. ಪದವೀಧರ ಆಗಿರುವ ಮನೋಜ್ ಅವರು ಹುಟ್ಟಿದ್ದು ಕೊಡಗಿನ ವಿರಾಜಪೇಟೆಯಲ್ಲಿ. ಸದ್ಯ ಮೈಸೂರು ನಗರದ ನಿವಾಸಿ. ...
READ MORE