ಕಾದಂಬರಿಕಾರ್ತಿ ಜಯಶ್ರೀ ದೇಶಪಾಂಡೆ ಅವರ ಕಾದಂಬರಿ ‘ಬೇವು’. ಕಾದಂಬರಿಗಳಿಗೆ ಕಥಾವಸ್ತುವಾಗಿ ಒದಗಿ ಬರುವ ಸಂಗತಿಗಳು ಎಷ್ಟೋ ಬಾರಿ ನಮ್ಮ ಕಲ್ಪನೆಯಸೀಮೆಗಳನ್ನೂ ಮೀರಿದ ಕಠೋರ ವಾಸ್ತವಗಳಾಗಿರುತ್ತವೆ. 'ಕೊಲೆ' ಎಂಬ ದಾರುಣದ ಸುತ್ತ ಹುತ್ತಗಟ್ಟಿ ಬರೆಸಿಕೊಂಡಿರುವ ಅಸಂಖ್ಯ ಕಾದಂಬರಿಗಳ ನಡುವೆ ಕೊಲೆ ಕೇಂದ್ರವಾಗಿದ್ದೂ ಕೊಲೆಯನ್ನು ಮುಖ್ಯ ವಸ್ತುವಾಗಿಸದೇ ಅದರ ಸಾಮಾಜಿಕ ಪರ್ಯವಸಾನವೂ ಎಷ್ಟು ಮಾನವೀಯ ಅಮಾನವೀಯವಾಗಿರಲು ಸಾಧ್ಯ ಎಂಬ ಅಲೋಚನೆ ಕಾಡಿದಾಗ ನನ್ನಿಂದ ಬರೆಸಿಕೊಂಡ ಒಂದು ಕಾದಂಬರಿ "ಬೇವು". ಈ ಕಾದಂಬರಿಯಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯಿಂದ ದೂರಾದ ಒಬ್ಬ ಹುಡುಗ ಚಿಕ್ಕಮ್ಮನ ಪ್ರೀತಿ ಸಿಕ್ಕರೂ ಸಮಾಜದ ಕುಹಕ ನುಡಿಗಳಿಂದ ನಕಾರಾತ್ಮಕವಾಗಿ ಬೆಳೆದು ತಪ್ಪು ಮಾಡಿ, ಶಿಕ್ಷೆ ಅನುಭವಿಸುವ ಕಥೆಯಿದೆ.ಈ ಕೃತಿಗೆ ಎನ್ ರಾಮನಾಥ್ ಅವರು ಮುನ್ನುಡಿ ಬರೆದಿದ್ದಾರೆ. ಕಾದಂಬರಿಗಳಿಗೆ ಕಥಾವಸ್ತುವಾಗಿ ಒದಗಿ ಬರುವ ಸಂಗತಿಗಳು ಎಷ್ಟೋ ಬಾರಿ ನಮ್ಮ ಕಲ್ಪನೆಯಸೀಮೆಗಳನ್ನೂ ಮೀರಿದ ಕಠೋರ ವಾಸ್ತವಗಳಾಗಿರುತ್ತವೆ. 'ಕೊಲೆ' ಎಂಬ ದಾರುಣದ ಸುತ್ತ ಹುತ್ತಗಟ್ಟಿ ಬರೆಸಿಕೊಂಡಿರುವ ಅಸಂಖ್ಯ ಕಾದಂಬರಿಗಳ ನಡುವೆ ಕೊಲೆ -ಕೇಂದ್ರವಾಗಿದ್ದೂ ಕೊಲೆಯನ್ನು ಮುಖ್ಯ ವಸ್ತುವಾಗಿಸದೇ ಅದರ ಸಾಮಾಜಿಕ ಪರ್ಯವಸಾನವೂ ಎಷ್ಟು ಮಾನವೀಯ ಯಾ ಅಮಾನವೀಯವಾಗಿರಲು ಸಾಧ್ಯ ಎಂಬ ಅಲೋಚನೆ ಕಾಡಿದಾಗ ನನ್ನಿಂದ ಬರೆಸಿಕೊಂಡ ಒಂದು ಕಾದಂಬರಿ "ಬೇವು". ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿದ್ದ ಕಾದಂಬರಿ ಇದೀಗ ಪುಸ್ತಕ ರೂಪದಲ್ಲಿ ನಿಮ್ಮ ಕೈಗೆ ಬರುತ್ತಿದೆ.
ಲೇಖಕಿ ಜಯಶ್ರೀ ದೇಶಪಾಂಡೆ ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ. ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ ಕೆಂದಾಯಿ ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ) ಹೌದದ್ದು ಅಲ್ಲ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು (ವಿಜಯ ಕರ್ನಾಟಕ), ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ) ಇವು ಧಾರಾವಾಹಿಯಾಗಿ ...
READ MORE