‘ಬೇವಾಚ್’ ನೌಶಾದ್ ಜನ್ನತ್ತ್ ಅವರ ಕಾದಂಬರಿಯಾಗಿದೆ. ಇಲ್ಲಿ ಕತ್ತಲೆ ಲೋಕದ ಬೆತ್ತಲೆಯ ಬದುಕಿನ ಅನಾವರಣವನ್ನು ಮಾಡಲಾಗಿದೆ. ಡಾನ್ಸರ್ ಹುಡುಗಿಯೊಬ್ಬಳ ಸುತ್ತ ಹೆಣೆದ ಈ ಕಾದಂಬರಿಯು ಪರಿಸ್ಥಿತಿ ಮತ್ತು ಜವಾಬ್ದಾರಿಯ ಕುರಿತು ಮಾತನಾಡುತ್ತದೆ. ಕತ್ತಲಾಗುತ್ತಿದ್ದಂತೆ ಎಚ್ಚರವಾಗುವ ಲೈವ್ ಬ್ಯಾಂಡಿನ ಝಗಮಗಿಸುವ ಬೆಳಕಿನಡಿಯಲ್ಲಿ, ಕಿವಿಗಡಚಿಕ್ಕುವ ಅಬ್ಬರದ ಹಾಡಿಗೆ ಅರೆಬರೆ ಬಟ್ಟೆತೊಟ್ಟು ಮೈ ಬಳಕಿಸುತ್ತಾ, ಗ್ರಾಹಕರನ್ನು ಕಣ್ಣಲ್ಲೇ ಸೆಳೆಯುವ ಯುವತಿಯೊಬ್ಬಳ ಸುತ್ತ ಹೆಣೆದ ಇಲ್ಲಿನ ಕತೆಯು, ಪರಿಸ್ಥಿತಿ ಮತ್ತು ಜವಾಬ್ದಾರಿ ಒಬ್ಬ ಮುಗ್ಧ ಹೆಣ್ಣನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ; ಮುಂದೆ, ಬದಲಾಗುವ ಅವಕಾಶ ಇದ್ದರೂ ಹಣದಾಸೆಗೆ ಬಿದ್ದ ಅವಳು ಯಾವ್ಯಾವ ಕುಕೃತ್ಯದಲ್ಲಿ ತೊಡಗಿಕೊಳ್ಳುತ್ತಾಳೆ ಎಂಬುದನ್ನು ಕಾಣಬಹುದು. ಜೊತೆಗೆ ಬಡತನ, ಮೋಸ, ವ್ಯಭಿಚಾರ, ಗಂಡು ಮಗುವಿನ ವ್ಯಾಮೋಹ, ಪೊಲೀಸರ ಕ್ರೌರ್ಯ, ಕ್ರೈಂ ಮಿಗಿಲಾಗಿ ಬೆಲೆವೆಣ್ಣುಗಳ ಸಹವಾಸ ಮಾಡುವುದರಿಂದಾಗುವ ಪರಿಣಾಮವನ್ನು ಕಾದಂಬರಿಯಲ್ಲಿ ಕಾಣಬಹುದಾಗಿದೆ.
ಲೇಖಕ ನೌಶಾದ್ ಜನ್ನತ್ತ್ ಮೂಲತಃ ಕೊಡಗಿನ ಮಡಿಕೇರಿ ಬಳಿಯ ಬೋಯಿಕೇರಿ ಗ್ರಾಮದವರು. ಸದ್ಯ ಕುಶಾಲನಗರದಲ್ಲಿ ವಾಸವಾಗಿದ್ದು, ಜನ್ನತ್ತ್ ಟಿಂಬರ್ಸ್ ಅಂಡ್ ಫರ್ನಿಚರ್ಸ್ ಎಂಬ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಬಿ. ಎ. ಪದವೀಧರರು. ‘ಕೊಡಗು’ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸಾಮಾಜಿಕ ಚಟುವಟಿಕೆ ನಡೆಸುತ್ತಿದ್ದಾರೆ. ಇವರ ಮೊದಲ ಕೃತಿ-’ಕಡಮ್ಮಕಲ್ಲು ಎಸ್ಟೇಟ್’’ ...
READ MORE