ಬೆಂಗಳೂರಿಗೊಂದು ಟಿಕೀಟು

Author : ಬಸವರಾಜ ಕಟ್ಟೀಮನಿ

Pages 151

₹ 10.00




Year of Publication: 1969
Published by: ಕಾದಂಬರಿ ಪ್ರಕಾಶನ
Address: ಧಾರವಾಡ-01.

Synopsys

ಬೆಂಗಳೂರಿಗೊಂದು ಟಿಕೀಟು ಕಾದಂಬರಿಯನ್ನು ಲೇಖಕ ಬಸವರಾಜ ಕಟ್ಟೀಮನಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಸದಾಶಿವ ಲೀಲಾವತಿ, ರಾಧಾ, ಬಸಪ್ಪ, ಕಾಮಾಕ್ಷ, ಪ್ರಜಾಪತಿ, ಮಲ್ಲಿಕಾರ್ಜುನ, ಮಾಲಿ, ಇಂದಿರಾವತಿ, ರುದ್ರೇಗೌಡ, ಸಿವಲಿಂಗ, ಸೋಮ, ಕಾಳೆಗೌಡ ಪಾತ್ರಗಳನ್ನು ಹೊಂದಿದೆ. ಕಾದಂಬರಿಯಲ್ಲಿ ಹಳ್ಳಿ ಸೊಗಡಿನ ಚಿತ್ರಣ, ಅಲ್ಲಿನ, ನಗರದತ್ತ ಪಯಣ, ಅದರಲ್ಲಿ ಬರುವ ತಿರುವುಗಳು ಇವೆಲ್ಲವನ್ನೂ ಲೇಖಕರು ಈ ಕಾದಂಬರಿಯಲ್ಲಿ ಸರಳ ಕನ್ನಡ ಭಾಷೆಯಲ್ಲಿ ವರ್ಣಿಸಿದ್ದಾರೆ.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books