ಬೇಹು

Author : ಯತಿರಾಜ್‍ ವೀರಾಂಬುಧಿ

Pages 384

₹ 270.00




Year of Publication: 2017
Published by: ಚಾರುಮತಿ ಪ್ರಕಾಶನ
Address: #224, 4ನೇ ಮುಖ್ಯರಸ್ತೆ, 3ನೇ ಕ್ರಾಸ್, ಚಾಮರಾಜಪೇಟೆ, ಬೆಂಗಳೂರು- 560018

Synopsys

‘ಬೇಹು’ ಲೇಖಕ ಯತಿರಾಜ್ ವೀರಾಂಬುಧಿ ಅವರ ಕಾದಂಬರಿ. ಕನ್ನಡದ ಜನಪ್ರಿಯ ಅಂಕಣಕಾರರು, ವ್ಯಕ್ತಿ ವಿಕಾಸನದ ತಜ್ಞರು ಮತ್ತು ಕಾದಂಬರಿಕಾರರೂ ಆಗಿರುವ ಯತಿರಾಜ್ ವೀರಾಂಬುಧಿ ಅವರು, ಬೇಹು ಕಾದಂಬರಿಯನ್ನು ಅತ್ಯಂತ ವಿಭಿನ್ನ ಶೈಲಿಯಲ್ಲಿ ರಚಿಸಿದ್ದಾರೆ. ಜನಪ್ರಿಯ ಸಾಮಾಜಿಕ ಕಾದಂಬರಿಯ ಶೈಲಿಯಲ್ಲಿ ಬರೆಯುತ್ತಲೇ ಹೊಸತನವನ್ನು ತೋರುವ ಇವರು, ತಮ್ಮ ಸುಲಲಿತ ಭಾಷೆಯ ಮೂಲಕ ಓದುಗರಿಗೆ ಆತ್ಮೀಯರಾಗುತ್ತಾರೆ. ನವಿರು ಹಾಸ್ಯ ಮತ್ತು ಸಕಾರಾತ್ಮಕ ಜೀವನದೃಷ್ಟಿ ಇವರ ಕಾದಂಬರಿಯ ಗುಣವಾಗಿದೆ.

About the Author

ಯತಿರಾಜ್‍ ವೀರಾಂಬುಧಿ
(11 August 1957)

ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು-  ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...

READ MORE

Related Books