‘ಭಾಂದವ್ಯದ ಬೆಸುಗೆ’ ಎ.ಸರಸಮ್ಮನವರ ಸಾಮಾಜಿಕ ಕಾದಂಬರಿಯಾಗಿದೆ. ಒಂದು ಕುಟುಂಬ ಸಂತೋಷ ಸಂಭ್ರಮಗಳಿಂದ ಕೂಡಿ ನಂದನವನವಾಗಬೇಕೆಂದರೆ ಆ ಮನೆಯ ಹೆಣ್ಣಿನ ತ್ಯಾಗ, ಪ್ರೀತಿ, ಪ್ರೇಮ, ವಿಶ್ವಾಸಗಳೇ ಬುನಾದಿಯಾಗಬೇಕು. ಸಹಕಾರ, ಸೌಹಾರ್ದ, ನಂಬಿಕೆ, ಮಮತೆಗಳು ಕಟ್ಟಡಗಳಾಗಿ ನಿರ್ಮಿಸಿದಾಗ ಮನೆ ಮಂದಿಯ ಪವಿತ್ರ ಬಂಧನವು ಇನ್ನೂ ಬಿಗಿಯಾಗುತ್ತದೆ. ಆ ಮನೆ ನೂರ್ಕಾಲ ಸುಖ ಸಂತೋಷದಿಂದ ಬಾಳುತ್ತದೆ ಇದು ಖಚಿತ. ಹೆಣ್ಣಿನ ಈ ಮನೋಭಾವನೆಗಳಿಗೆ ಗಂಡಸರ ಸಹಮತ ಪ್ರೋತ್ಸಾಹಗಳು ಬಹು ಮುಖ್ಯ. ಇಂತಹ ಕುಟುಂಬಗಳು ಸುಖ, ಸಂತೋಷಗಳಿಂದ ತುಂಬಿ ತುಳುಕಲು ದೇವರು ಸಹ ಅನುಗ್ರಹ ತೋರುತ್ತಾನೆ. ಮನಸುಗಳು ಬಿರುಕು ಬಿಟ್ಟಾಗ ಅಲ್ಲಿ ನೆಮ್ಮದಿ ಮೂಡದೆ ಬಿರುಗಾಳಿ ಬೀಸಿ ಬಾಳನೌಕೆ ಅಲುಗಾಡುತ್ತದೆ. ಆಗ ಸಂಬಂಧಗಳಲ್ಲಿ ಪರಸ್ಪರ ನಂಬಿಕೆ ವಿಶ್ವಾಸಗಳು ಮುರಿಯುತ್ತವೆ. ಹೆಣ್ಣಿನ ಬಾಳು ನೋವಿನ ಕಡಲಲ್ಲಿ ಮುಳುಗಿ ಪ್ರೀತಿ, ಪ್ರೇಮಗಳು ದೂರವಾಗಿ ಕೋಪ, ತಾಪಗಳು ಎಲ್ಲರ ಮನದಲ್ಲಿ ಹೊಗೆಯಾಡುತ್ತ ಮನಸು ಮುದುಡುತ್ತದೆ. ಮನದಲ್ಲಿ ಮಮಕಾರ ತುಂಬಲು ರಕ್ತಸಂಬಂಧವೇ ಬೇಕಿಲ್ಲ. ಪ್ರೀತಿ ತುಂಬಿದ ಹೃದಯ ಕರುಳಿನ ಮಿಡಿತವನ್ನು ಸೂಚಿಸುತ್ತದೆ. ಅವಿಭಕ್ತ ಕುಟುಂಬಗಳು ಉಳಿಯಬೇಕಾದರೆ ಪರಸ್ಪರರಲ್ಲಿ ಹೊಂದಾಣಿಕೆ, ವಿಶ್ವಾಸ, ನಂಬಿಕೆಗಳಿರಬೇಕು ಎಂದು ಈ ಪುಸ್ತಕ ತಿಳಿಸುತ್ತದೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE