ಬಾನಾಮತಿ ಪ್ರಭಾವ

Author : ಎನ್. ನರಸಿಂಹಯ್ಯ

₹ 125.00




Year of Publication: 2012
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560 009
Phone: 08040114455

Synopsys

ಲೇಖಕ ಎನ್. ನರಸಿಂಹಯ್ಯ ಅವರ ಕಾದಂಬರಿ ಬಾನಾಮತಿ ಪ್ರಭಾವ. ಶಕ್ತಿಯ ಆರಾಧಕರು ಆ ದೇವತೆಯನ್ನು ಪೂಜಿಸಿ, ಒಲಿಸಿಕೊಂಡು , ಆ ಆರಾಧನೆಯಿಂದ ಪಡೆದ ಶಕ್ತಿಯನ್ನು ಇತರರ ಮೇಲೆ ಪ್ರಯೋಗಿಸುವ ವಾಡಿಕೆ ಹಿಂದಿನಿಂದಲೂ ಬಂದದ್ದೇ. ಈ ಬಗೆಯ ಬಳಕೆಯಲ್ಲಿ ಎರಡು ವಿಧ. ವಾಮಾಚಾರ ಮತ್ತು ವೇದಾಚಾರ. ವಾಮಾಚಾರ ಬಳಕೆ ಹೆಸರೇ ಸೂಚಿಸುವಂತೆ , ಭೂತ ಚೇಷ್ಟೆಗಳನ್ನು ಸೃಷ್ಟಿಸಿ ಸಮಾಜದಲ್ಲಿ ಆತಂಕ ಮೂಡಿಸುವುದು, ಅನೇಕ ಅಮಂಗಳ ಘಟನೆ ನಡೆಯಲು ಪ್ರಚೋದಿಸಿ , ಅಹಿತಕರ ವಾತಾವರಣ ಮೂಡಿಸುವುದೇ ಇದರ ಉದ್ದೇಶ. ಮುಯ್ಯಿ ತೀರಿಸಿಕೊಳ್ಳಲು , ದ್ವೇಷದ ಪೂರೈಕೆಗಾಗಿ ಬಳಸಿ ಹಣ ಪಡೆಯುವ ದುರುದ್ದೇಶ ಈ ಮಾಟಗಾರನದು. ಬಾನಾಮತಿ ಕೂಡ ಇದರಲ್ಲಿ ಒಂದು ಬಗೆ. ಇಲ್ಲಿ ಭೂತದ ಚೇಷ್ಟೆಗಿಂತ ಕಣ್ಣು ಕಟ್ಟಿನ ಸಂಗತಿಗಳು ನಡೆಯುತ್ತವೆ. ಅಂದರೆ ಘಟನೆ ಸಂಭವಿಸಿದೆ ಎಂಬ ಅನುಭವ ಮಾತ್ರ. ಇದರ ಪ್ರಭಾವಕ್ಕೆ ಒಳಗಾದವನು ಅನುಭವಕ್ಕೆ ಬಂದರೂ ಘಟನೆ ನಡೆದೇ ಇರುವುದಿಲ್ಲ, ತಾನು ಕಣ್ಣಾರೆ ಕಂಡ ವ್ಯಕ್ತಿ ಅರೆ ಕ್ಷಣದಲ್ಲಿ ಇಲ್ಲವಾಗಿರುತ್ತಾನೆ. ಮನೆಯ ಮೇಲೆ ರಾತ್ರಿಯೆಲ್ಲಾ ಸುರಿದ ಕಲ್ಲಿನ ಮೇಲೆ ಬೆಳಕು ಹರಿಯುವುದರಲ್ಲಿ ಕಾಣೆಯಾಗಿರುತ್ತದೆ. ಇದು ಬಾನಾಮತಿಯ ಪ್ರಭಾವ. ವೇದ ಶಕ್ತಿಯ ಬಳಕೆ ಸಾಮಾನ್ಯವಾಗಿ ವಾಮಪಂಥ ದಿಂದ ಆದ ಆಘಾತಗಳನ್ನು, ಅಪಘಾತಗಳನ್ನು ಸರಿ ಪಡಿಸಲು ಬಳಸಲ್ಪಡುತ್ತದೆ. ಎನ್. ನರಸಿಂಹಯ್ಯನವರ ‘ಬಾನಾಮಾತಿ ಪ್ರಭಾವ’ ಇಂಥ ವಾಮ ಶಕ್ತಿಯ ಪ್ರಯೋಗವನ್ನು ಕುರಿತ ಕಾದಂಬರಿಯಾಗಿದೆ. ಅದಷ್ಟಕ್ಕೆ ಸೀಮಿತವಾಗದೆ ಪತ್ತೇದಾರಿ ವಿದ್ಯೆಯ ಪ್ರಯೋಗ ಕೂಡ ಇದೆ. ಎರಡೂ ಶಾಸ್ತ್ರಗಳ ಮಿಳಿತವಾಗಿ ರಚಿತಗೊಂಡಿರುವ ಕಾದಂಬರಿ ಇದು

About the Author

ಎನ್. ನರಸಿಂಹಯ್ಯ
(18 September 1925 - 25 December 2011)

ಹೊಸ ವಸ್ತು, ತಂತ್ರಗಾರಿಕೆ ಮೂಲಕ ತಮ್ಮದೇ ಓದುಗರನ್ನು ಸೃಷ್ಟಿಸಿಕೊಂಡು, ಪತ್ತೆದಾರಿ ಕಾದಂಬರಿಗಳ ಜನಕನೆನ್ನುವಷ್ಟು ಪ್ರಸಿದ್ಧಿ ಗಳಿಸಿದ್ದವರು ಎನ್‌. ನರಸಿಂಹಯ್ಯ. ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಸಿ. ನಂಜಪ್ಪ, ತಾಯಿ ಯಲ್ಲಮ್ಮ. ನರಸಿಂಹಯ್ಯನವರು ಓದಿದ್ದು ಕನ್ನಡ ನಾಲ್ಕನೆಯ ತರಗತಿಯವರೆಗೆ. 18 -09-1925 ರಂದು ಜನನ. ತಂದೆಯ ಅಕಾಲ ಮರಣದಿಂದ ಓದು ನಿಲ್ಲಿಸಿ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿದರು. ನಂತರ ಖಾಸಗಿ ಬಸ್‌ ಕ್ಲೀನರ್ ಆಗಿ, ಕಂಡಕ್ಟರಾಗಿ ಯಾವುದೂ ಸರಿಯಾಗದೇ, ಪ್ರಿಂಟಿಂಗ್‌ ಪ್ರೆಸ್‌ನಲ್ಲಿ ಮೊಳೆ ಜೋಡಿಸುವ ಕೆಲಸಕ್ಕೆ ಸೇರಿದರು. ಹೀಗೆ ಮೊಳೆ ಜೋಡಿಸುತ್ತಲೇ ಕಾದಂಬರಿಗಳನ್ನು ಓದತೊಡಗಿದರು. ಮ. ರಾಮಮೂರ್ತಿಯವರು ಬರೆದಿದ್ದ ಪತ್ತೇದಾರಿ ...

READ MORE

Related Books